More

    ಸೋಂಕಿತರ ಸಂಖ್ಯೆ 72ಕ್ಕೇರಿಕೆ

    ಕಲಬುರಗಿ : ಜಿಲ್ಲೆಯಲ್ಲಿ ಸೋಮವಾರ ಮತ್ತೊಂದು ಕರೊನಾ ಪ್ರಕರಣ ಪತ್ತೆಯಾಗಿದೆ. ಮಿಜಗುರಿ ಪ್ರದೇಶದ 38 ವರ್ಷದ ವ್ಯಕ್ತಿಗೆ (ಪಿ-849) ಕರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 72ಕ್ಕೇರಿದೆ. ಸೋಂಕಿತನನ್ನು ಇಎಸ್ಐಸಿ ಆಸ್ಪತ್ರೆ ಐಸೋಲೇಷನ್ ವಾರ್ಡ್​ಗೆ ಸೇರಿಸಲಾಗಿದ್ದು, ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ. ಈತನ ಕುಟುಂಬದವರು ಮತ್ತು ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ನಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
    ಈ ಮಧ್ಯೆ ಅಮರಾವತಿಯಿಂದ ಚಿತ್ತಾಪುರಕ್ಕೆ 14 ಜನ ಬಂದಿರುವುದು ಸ್ಥಳೀಯರಲ್ಲಿ ಗಾಬರಿ ಮೂಡಿಸಿದೆ. ಇವರೆಲ್ಲರನ್ನು ಕೊಂಚೂರ ಹತ್ತಿರದ ಏಕಲವ್ಯ ಶಾಲಾ ಕೊಠಡಿಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ. ಇದುವರೆಗೆ ಸೋಂಕಿನಿಂದ ಆರು ಜನ ಪ್ರಾಣ ಕಳೆದುಕೊಂಡಿದ್ದು, 44 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
    ಜಿಲ್ಲೆಯಲ್ಲಿ ಈವರೆಗೆ 6370 ಜನ ಶಂಕಿತರ ರಕ್ತ, ಗಂಟಲು ಕ ಟೆಸ್ಟ್ಗೆ ಕಳುಹಿಸಲಾಗಿದ್ದು, 6136 ಜನರ ನೆಗೆಟಿವ್ ರಿಪೋರ್ಟ್​ ಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 162 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು 27 ಕಂಟೇನ್ಮೆಂಟ್ ಜೋನ್ಗಳಿದ್ದು ಅವುಗಳಲ್ಲಿ 21 ಸಕ್ರೀಯವಾಗಿವೆ. ಈ ಜೋನ್ಗಳಡಿ 49631 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.
    ಪ್ರೈಮರಿ ಕಾಂಟ್ಯಾಕ್ಟ್ಸ್ 1031, ಸೆಕಂಡರಿ ಕಾಂಟ್ಯಾಕ್ಟ್ಸ್ 3359, ವಿದೇಶದಿಂದ ಬಂದವರು 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 995 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1622 ಜನರನ್ನು ಮುಕ್ತಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1817 ಜನರನ್ನು ಮುಕ್ತಗೊಳಿಸಿ ಈ ನಂತರವೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸ್ವಯಂ ಪ್ರೇರಣೆಯಿಂದ ವರದಿ ಮಾಡುವಂತೆ ಸೂಚಿಸಲಾಗಿದೆ. 51ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾರ್ಡನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts