More

    ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ

    ಕೆ.ಆರ್.ನಗರ: ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಕೊಡಿಸುವುದರ ಜತೆಗೆ ಅಗತ್ಯ ಅನುದಾನ ನೀಡುವುದಾಗಿ ಶಾಸಕ ಸಾ.ರಾ.ಮಹೇಶ್ ಭರವಸೆ ನೀಡಿದರು.


    ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಷೇರುದಾರ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘ ವ್ಯವಹಾರ ನಡೆಸುವಂತೆ ಸಲಹೆ ನೀಡಿದರು.


    ಸಹಕಾರ ಸಂಘಗಳಲ್ಲಿರುವ ಆಡಳಿತ ಮಂಡಳಿಯವರು ಸಂಘದ ಹಣದಿಂದ ಸಭೆ ಮತ್ತು ಸಮಾರಂಭಗಳನ್ನು ಮಾಡುತ್ತಾರೆ. ಆದರೆ ಈ ಸೊಸೈಟಿಯ ಆಡಳಿತ ಮಂಡಳಿಯು ಸ್ವಂತ ಹಣದಿಂದ ಪ್ರತಿಭಾ ಪುರಸ್ಕಾರ, ಸಾಮಾನ್ಯ ಸಭೆ ಮಾಡುತ್ತಿರುವುದು ಶ್ಲಾಘನೀಯ. ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಇದೇ ರೀತಿ ನಡೆದುಕೊಂಡರೆ ಆದಾಯ ವೃದ್ಧಿಯಾಗಿ ಜಿಲ್ಲೆಯಲ್ಲಿಯೇ ಮಾದರಿಯಾಗಲಿದೆ ಎಂದು ತಿಳಿಸಿದರು.


    ಮಿರ್ಲೆ ಮತ್ತು ಹರದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 80 ಲಕ್ಷ ರೂ.ಅವ್ಯವಹಾರ ನಡೆದಿದ್ದು, ಕಾರ್ಯದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಕೋ ಆಪರೇಟಿವ್ ಸಂಸ್ಥೆಗಳನ್ನು ನಡೆಸುವಾಗ ಆಡಳಿತ ಮಂಡಳಿ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು, ಆಗಮಾತ್ರ ಸಂಘ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದರು.


    ಸೊಸೈಟಿ ಅಧ್ಯಕ್ಷ ಹಾಗೂ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಸೊಸೈಟಿ 3.97 ಲಕ್ಷ ರೂ.ನಿವ್ವಳ ಲಾಭದಲ್ಲಿದ್ದು, 11.13 ಲಕ್ಷ ರೂ.ಷೇರು ಬಂಡವಾಳ ಹೊಂದಿದೆ. ವಾರ್ಷಿಕ 1,37 ಕೋಟಿ ರೂ.ವಹಿವಾಟು ನಡೆಸಿದೆ ಎಂದರು.


    ಈ ಸಂದರ್ಭದಲ್ಲಿ ಹೆಚ್ಚು ಷೇರು ಬಂಡವಾಳ ಹೂಡಿದ ಸದಸ್ಯರಿಗೆ ಸನ್ಮಾನ ಮತ್ತು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


    ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಒಕ್ಕಲಿಗರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಿ.ಸಿ.ಶಿವರಾಮು ಮಾತನಾಡಿದರು.


    ತಹಸೀಲ್ದಾರ್ ಎಸ್.ಸಂತೋಷ್, ಎಂ.ಎಸ್.ಯದುಗಿರೀಶ್, ನಿವೃತ್ತ ಬಿಇಒ ಎಂ.ರಾಜು, ಜಿಪಂ ಮಾಜಿ ಸದಸ್ಯೆ ಕಲ್ಪನಾ ಧನಂಜಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ಸೊಸೈಟಿಯ ನಿರ್ದೇಶಕರಾದ ಸುದೀಶ್‌ಕುಮಾರ್, ಅಂಕನಹಳ್ಳಿ ತಿಮ್ಮಪ್ಪ, ಶಂಕರೇಗೌಡ, ಸಿ.ಆರ್.ಉದಯ್‌ಕುಮಾರ್, ಚಂದ್ರಶೇಖರ್(ಕೋಳಿರಾಜು), ಕವಿತಾ ಪ್ರಕಾಶ್, ಸಿ.ಜೆ.ಆನಂದ್, ಎಂ.ಟಿ.ಕುಮಾರ್, ದೇವೇಂದ್ರ, ಈಶ್ವರ್, ಯೋಗೇಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts