More

    ಸೊರಬದಲ್ಲಿ ಬೀಡಾಡಿ ದನಗಳ ಹರಾಜು ಹಾಕಲು ತೀರ್ಮಾನ: ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ

    ಸೊರಬ: ಪಟ್ಟಣದಲ್ಲಿ ಬೀಡಾಡಿ ದನಗಳನ್ನು ಹಿಡಿದು ಪಾಲನೆ ಮಾಡಲು ಕಾನೂನು ಬದ್ಧವಾಗಿ ಹರಾಜು ಹಾಕಲು ಕ್ರಮ ಕೈಗೊಳ್ಳುವಂತೆ ಗುರುವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
    ಪಟ್ಟಣದಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಾಗೂ ಜಾನುವಾರುಗಳು ರಾತ್ರಿ ಹಗಲು ಎನ್ನದೆ ವಾಹನ ಸವಾರರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ನೀಡುತ್ತಿವೆ. ಹಲವು ವರ್ಷಗಳಿಂದ ಈ ಬಗ್ಗೆ ಸಮರ್ಪಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಎಂ.ಡಿ ಉಮೇಶ್ ಸಭೆಯ ಗಮನಕ್ಕೆ ತಂದರು. ಪಶುಪಾಲನಾ ಅಧಿಕಾರಿ ಪ್ರದೀಪ್ ಅವರಿಗೆ ಈ ಬಗ್ಗೆ ಸೂಕ್ತ ಮಾಗೋಪಾಯ ಸೂಚಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್, ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಬಹುದಾಗಿದೆ. ಇದಕ್ಕೆ ಪುರಸಭೆ ಸಹಕಾರ ಅಗತ್ಯ. ದನಗಳಿಗೆ ಅರಿವಳಿಕೆ ನೀಡಿ ಹಿಡಿಯಲು ನಮಗೆ ಅವಕಾಶವಿಲ್ಲ. ತಾವೇ ಸೂಕ್ತ ಕ್ರಮ ಕೈಗೊಂಡು ಅವುಗಳನ್ನು ಹಿಡಿಯಲು ಮುಂದಾದರೆ ನಾವು ಸಹಕಾರ ನೀಡುವುದಾಗಿ ತಿಳಿಸಿದರು. ನಂತರ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಬೀಡಾಡಿ ದನಗಳ ಹಿಡಿದು ಹರಾಜು ಹಾಕಲು ತೀರ್ಮಾನಿಸಲಾಯಿತು.
    ಸಭೆ ಆರಂಭವಾಗುತ್ತಿದ್ದಂತೆ ಅಜೆಂಡಾ ವಿಷಯಗಳನ್ನು ಬಿಟ್ಟು ಪುರಸಭಾ ವ್ಯಾಪ್ತಿಗೆ ಒಳಪಡದ ಮೆಸ್ಕಾಂ ಹಾಗೂ ಪಶುಪಾಲನಾ ಅಧಿಕಾರಿಗಳಿಗೆ ಸಂಬಂಧಪಟ್ಟ ವಿಷಯವನ್ನು ಹಲವು ಸದಸ್ಯರು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಸುಧೀರ್ಘ ಚರ್ಚೆ ಮಧ್ಯೆ ಪರವಾನಗಿ ಇಲ್ಲದೆ ನೀರಿನ ಟ್ಯಾಂಕರ್‌ನ್ನು ಮನೆಕಟ್ಟುವವರಿಗೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ನಟರಾಜ್ ಕೇಳಿದಾಗ ಎಂ.ಡಿ.ಉಮೇಶ್ ಪ್ರಭು ಮೇಸ್ತ್ರಿ ಹಾಗೂ ಅಧ್ಯಕ್ಷ ಈರೇಶ್ ಮೇಸ್ತ್ರಿ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಧ್ಯಕ್ಷರು ನೀರು ನೀಡಿದ ಬಗ್ಗೆ ಲಿಖಿತ ಮಾಹಿತಿ ನೀಡಿದರು.
    ಬೆಳಕು ಯೋಜನೆಯಡಿಯಲ್ಲಿ 35 ಮನೆಗಳಿಗೆ ವಿದ್ಯುತ್ ಕಲ್ಪಿಸಲಾಗಿದ್ದು ಈ ಯೋಜನೆಯನ್ನು ಮುಂದುವರಿಸಬೇಕು. ಜತೆಗೆ ಪಟ್ಟಣದಲ್ಲಿ ಅನಿಯಮಿತವಾಗಿ ವಿದ್ಯುತ್ ತೆಗಿಯಲಾಗುತ್ತಿದೆ ಹಾಗೂ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಗಿಡಗಂಟಿಗಳು ಬೆಳೆದಿವೆ. ಅವುಗಳನ್ನು ತೆರವುಗೊಳಿಸುವಂತೆ ಮೆಸ್ಕಾಂ ಎಸ್‌ಒ ಉಮೇಶ್ ಅವರಿಗೆ ತಿಳಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್, ಪುರಸಭೆ ವ್ಯಾಪ್ತಿಯಲ್ಲಿ 90 ಟ್ರಾನ್ಸ್‌ಫಾರ್ಮರ್ ಇದ್ದು ಗ್ರಾಮೀಣ ಪ್ರದೇಶದಲ್ಲಿ ಶೇ.25ರಿಂದ 30 ರೈತರ ಐಪಿ ಸೆಟ್‌ಗಳ ಅನಧಿಕೃತವಾಗಿವೆ. ಅವುಗಳನ್ನು ಸಕ್ರಮಗೊಳಿಸುವಂತೆ ಕ್ರಮಕೈಗೊಂಡಲ್ಲಿ ರೈತರಿಗೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಪಟ್ಟಣಕ್ಕೆ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತದೆ. ಬೆಳಕು ಯೋಜನಡಿಯಲ್ಲಿ ವಿದ್ಯುತ್ ನೀಡುವಂತೆ ಸಭೆ ಕೈಗೊಂಡ ನಿರ್ಣಯಗಳನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
    ಪಟ್ಟಣದಲ್ಲಿ ಕೆಲವು ಮನೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸಿ ಮರಗಳ ಕಟಾವು ಮಾಡುವ ಯಂತ್ರಗಳನ್ನು ಹಾಕಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎಂ.ಡಿ.ಉಮೇಶ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts