More

    ಸೊಗಲದಲ್ಲಿ 2 ವರ್ಷದ ಮಗು ಅಪಹರಣ

    ಬೆಳಗಾವಿ: ದೇವರ ದರ್ಶನಕ್ಕೆಂದು ತೆರಳಿದ ಕುಟುಂಬದಲ್ಲಿನ 2 ವರ್ಷದ ಮಗುವನ್ನು ಅಪಹರಿಸಿರುವ ಘಟನೆ ಸುಕ್ಷೇತ್ರ ಸೊಗಲದಲ್ಲಿ ನಡೆದಿದ್ದು. ಪಾಲಕರು ಆ.16ರಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಆರೋಹಿ ಮಹಾದೇವಪ್ಪ ಪವಾರ್ ಅಪಹರಣಕ್ಕೊಳಗಾದ ಬಾಲಕಿ.

    ಬಾಲಕಿಯು ಅಜ್ಜಿ ಭಾರತಿ ವೈಜು ಪವಾರ ಅವರೊಂದಿಗೆ ಆ.16ರಂದು ಸೊಗಲಕ್ಕೆ ತೆರಳಿದ್ದಾಗ ಮಧ್ಯಾಹ್ನ 1ರಿಂದ 2ರ ಅವಧಿಯಲ್ಲಿ ಅಪಹರಿಸಲಾಗಿದೆ ಎನ್ನಲಾಗಿದೆ.

    ಆರೋಹಿ 2 ಅಡಿ 6 ಇಂಚು ಎತ್ತರ, ದುಂಡು ಮುಖ, ಕೊರಳಲ್ಲಿ ಕೆಂಪು ಬಣ್ಣದ ತಾಯತ ಧರಿಸಿದ್ದು, ಸುಳಿವು ಸಿಕ್ಕರೆ ಸವದತ್ತಿ ಪೊಲೀಸ್ ಠಾಣೆ ಸಿಪಿಐ 9480804039, ಮುರಗೋಡ ಪಿಎಸ್‌ಐ 9480804079 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 9480804000 ಸಂಖ್ಯೆ ಸಂಪರ್ಕಿಸಲು ಕೋರಲಾಗಿದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts