More

    ಸೈಕ್ಲಿಂಗ್​ನಿಂದ ದೈಹಿಕ, ಮಾನಸಿಕ ಆರೋಗ್ಯ ಸಿದ್ಧಿ

    ಕಾರವಾರ: ಸೈಕ್ಲಿಂಗ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಿದ್ಧಿಸಿಕೊಳ್ಳುವ ಜತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡಬಹುದು ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಳ ನಿರ್ದೇಶಕ ಆರ್. ಸತ್ಯನಾರಾಯಣ ಹೇಳಿದರು.

    ಫೀಟ್ ಇಂಡಿಯಾ ಕಾರ್ಯಕ್ರಮದಡಿ ನೆಹರು ಯುವ ಕೇಂದ್ರ ಹಾಗೂ ಎನ್​ಪಿಸಿಐಎಲ್​ನಿಂದ ಡಿ.21 ರವರೆಗೆ ಆಯೋಜಿಸಿರುವ ಸೈಕ್ಲೊಥಾನ್ ಚಾಲೆಂಜ್​ಗೆ ಸೋಮವಾರ ನಗರದ ಎಂ.ಜಿ.ರಸ್ತೆಯಿಂದ ಚಾಲನೆ ನೀಡಿ ಮಾತನಾಡಿದರು.

    ಕರೊನಾ ಲಾಕ್​ಡೌನ್ ಕಾರಣ ಹಲವರು ದೈಹಿಕ ಶ್ರಮವಿಲ್ಲದೆ ಸ್ಥೂಲ ಕಾಯ ಬೆಳೆಸಿಕೊಂಡಿದ್ದಾರೆ. ಸೈಕ್ಲಿಂಗ್ ಮೂಕಲ ಬೊಜ್ಜು ಕರಗಿಸಬಹುದು. ಹೃದಯಕ್ಕೆ, ಮಾಂಸಖಂಡ ಹಾಗೂ ಕೀಲುಗಳ ಆರೋಗ್ಯಕ್ಕೂ ಸೈಕ್ಲಿಂಗ್ ಉತ್ತಮ ಎಂದರು.

    50 ರಷ್ಟು ಜನ ಸೈಕ್ಲಿಂಗ್​ನಲ್ಲಿ ಭಾಗವಹಿಸಿದ್ದರು. ಕೈಗಾದ ಅಧಿಕಾರಿಗಳಾದ ಆರ್.ವಿ. ಮನೋಹರ, ಜಗನ್​ಜೆ. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಯಶವಂತ ಯಾದವ, ಅಕೌಂಟೆಂಟ್ ಮೀರಾ ನಾಯ್ಕ, ಕಾರ್ಯಕರ್ತರಾದ ಪೂಜಾ ಕಳಸ, ಪರಸಪ್ಪ ಹೊನ್ನೂರ್, ಅನಿಲ ರೇವಣಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts