More

    ಸೇವೆ ರದ್ದುಪಡಿಸಿದ್ದ 5 ವಿಮಾನಗಳು

    ಹುಬ್ಬಳ್ಳಿ: ಜನತಾ ಕರ್ಫ್ಯೂ ಬೆಂಬಲಿಸಿ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಚರಿಸುವ ಐದು ವಿಮಾನಗಳ ಸಂಚಾರವನ್ನು ಭಾನುವಾರ ಸ್ಥಗಿತಗೊಳಿಸಿದ್ದವು.

    ಏರ್ ಇಂಡಿಯಾ ಸಂಸ್ಥೆಯ ಹೈದರಾಬಾದ್, ಮುಂಬೈ, ಬೆಂಗಳೂರು ವಿಮಾನ, ಇಂಡಿಗೊ ಸಂಸ್ಥೆಯ ಕೊಣ್ಣೂರು ವಿಮಾನ, ಸ್ಟಾರ್ ಏರ್ ಸಂಸ್ಥೆಯ ತಿರುಪತಿ, ಬೆಂಗಳೂರಿಗೆ ತೆರಳುವ ವಿಮಾನಗಳು ಬಂದ್ ಆಗಿದ್ದವು. ಏರ್ ಇಂಡಿಯಾ ಈ ಮೊದಲೇ ಮುಂಬೈ ಹಾಗೂ ಹೈದರಾಬಾದ್ ನಡುವಿನ ಸಂಚಾರ ಬಂದ್ ಮಾಡಿತ್ತು. ಇದೀಗ ಬೆಂಗಳೂರು ವಿಮಾನವನ್ನೂ ರದ್ದುಪಡಿಸಿದೆ.

    ಭಾನುವಾರದ ಮಟ್ಟಿಗೆ ವಿಮಾನ ಸಂಚಾರ ರದ್ದುಗೊಳಿಸಲಾಗಿದ್ದು, ಸೋಮವಾರ ಯಾವುದೇ ವಿಮಾನ ಸಂಚಾರ ರದ್ದತಿ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕರೆ ‘ವಿಜಯವಾಣಿ’ಗೆ ತಿಳಿಸಿದರು.

    ಪ್ರಯಾಣಿಕರ ಸಂಖ್ಯೆ ಭಾರಿ ಇಳಿಕೆ: ದೇಶದಲ್ಲಿ ಕರೊನಾ ಸೋಂಕು ಪತ್ತೆಯಾದ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಚರಿಸುವ, ಹುಬ್ಬಳ್ಳಿಗೆ ಆಗಮಿಸುವ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 40ರಷ್ಟು ಇಳಿಕೆಯಾಗಿದೆ ಎಂದು ಪ್ರಮೋದ ಠಾಕರೆ ತಿಳಿಸಿದ್ದಾರೆ. ಕೆಲ ವಿಮಾನಗಳಲ್ಲಿ ಶೇ.80ರಷ್ಟು ಪ್ರಯಾಣಿಕರ ಕೊರತೆ ಕಂಡುಬಂದಿದೆ.

    ಮಾ. 29ರಿಂದ ಮಂಗಳೂರಿಗೆ ವಿಮಾನ: ಮೊದಲೇ ನಿಗದಿಯಾದಂತೆ ಇಂಡಿಗೋ ಸಂಸ್ಥೆ

    ಮಾ. 29ರಿಂದ ಹುಬ್ಬಳ್ಳಿ- ಮಂಗಳೂರಿಗೆ ನೇರ ವಿಮಾನ ಸೇವೆ ಆರಂಭಿಸಲಿದೆ. ಪ್ರತಿದಿನ ಸಂಜೆ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25ಕ್ಕೆ ಮಂಗಳೂರು ತಲುಪುತ್ತದೆ. ಸಂಜೆ 6.45ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 7.55ಕ್ಕೆ ಹುಬ್ಬಳ್ಳಿಗೆ ಬರಲಿದೆ. ಉಳಿದಂತೆ ಇಂಡಿಗೋ ಸಂಸ್ಥೆಯ ವಿಮಾನಗಳು ಹುಬ್ಬಳ್ಳಿಯಿಂದ ಅಹಮದಾಬಾದ್, ಬೆಂಗಳೂರು, ಚೆನ್ನೈ, ಗೋವಾ, ಕೊಚ್ಚಿನ್​ಗೆ ಸಂಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

    ಕಿಮ್ಸ್​ನಲ್ಲಿ ಚಿಕಿತ್ಸೆಗೆ ಸಿದ್ಧತೆ: ಹುಬ್ಬಳ್ಳಿ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ಮಾಸ್ಕ್, ಪರ್ಸನಲ್ ಪ್ರೊಟೆಕ್ಷನ್ ಕಿಟ್ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸದ್ಯ 70 ಪರ್ಸನಲ್ ಪ್ರೊಟೆಕ್ಷನ್ ಕಿಟ್, 14,500 ಡಿಸ್ಪೋಸಲ್ 3 ಲೇಯರ್ ಮಾಸ್ಕ್, 490 ಹ್ಯಾಂಡ್ ಸ್ಯಾನಿಟೈಸರ್, 2050 ಎನ್-95 ಮಾಸ್ಕ್, 4 ಥರ್ಮಲ್ ಸ್ಕ್ಯಾನರ್, ಔಷಧವಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 250 ಬೆಡ್ ಸಿದ್ಧಪಡಿಸಲಾಗಿದೆ.

    ರಾಯಚೋಟಿಯಲ್ಲಿ ಅರ್ಚನೆ, ಅಭಿಷೇಕ ಬಂದ್

    ಧಾರವಾಡ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಯಚೋಟಿಯ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ನಿತ್ಯ ನಡೆಯುತ್ತಿದ್ದ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜೆ, ಅರ್ಚನೆ, ಆರಾಧನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ರಾಜ್ಯದ ಬಹುತೇಕ ಜಿಲ್ಲೆಗಳ ಭಕ್ತರು ಪ್ರತಿ ಅಮವಾಸ್ಯೆಯಂದು ರಾಯಚೋಟಿ ಕ್ಷೇತ್ರಕ್ಕೆ ತೆರಳಿ ಅಭಿಷೇಕ, ಅರ್ಚನೆ ಪೂರೈಸುವರು. ಕೇಂದ್ರ ಸರ್ಕಾರ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಆದೇಶದಂತೆ ಕರೊನಾ ವೈರಸ್ ಹರಡುವಿಕೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಧರ್ಮದರ್ಶಿ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಮಾ. 24ರಂದು ಯುಗಾದಿ ಅಮವಾಸ್ಯೆ ಮತ್ತು 25ರಂದು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಕರೊನಾ ರೋಗ ನಿಯಂತ್ರಣ ಉದ್ದೇಶದಿಂದ ಯುಗಾದಿ ಅಮವಾಸ್ಯೆ ಹಾಗೂ ಹಬ್ಬದ ಸಂದರ್ಭದಲ್ಲಿ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜೆ, ಅರ್ಚನೆ, ಆರಾಧನೆಯನ್ನು ನಿಲ್ಲಿಸಲಾಗಿದೆ.

    ದರ್ಶನ ಮಾತ್ರ: ರಾಯಚೋಟಿಯ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಮಾತೆಯ ದರ್ಶನಕ್ಕೆ ಪ್ರತಿದಿನ ಕೆಲವೇ ಕ್ಷಣಗಳವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಟಿ. ಮಂಜುಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts