More

    ಸೇವೆಗೈಯುತ್ತಲೇ ಅಸುನೀಗಿದ ಕರೊನಾ ಸೇನಾನಿ!

    ಹುಬ್ಬಳ್ಳಿ: ಸೋಫಿಯಾ ಕನವಳ್ಳಿ. ಕೋವಿಡ್ ವಾರಿಯರ್. ಕಳೆದ 16 ವರ್ಷಗಳಿಂದ ನಗರದ ಕಿಮ್ಸ್​ನಲ್ಲಿ ಸ್ಟಾಫ್ ನರ್ಸ್. ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ನಿರಂತರ ಸೇವೆ. ಹಲವರನ್ನು ಬದುಕಿಸುವಲ್ಲಿ ಮಹತ್ವದ ಪಾತ್ರ. ಆದರೆ, ವಿಧಿಯಾಟವೇ ಬೇರೆ. ಇದೇ ಹೆಮ್ಮಾರಿಗೆ ಸೋಫಿಯಾ ಬಲಿ!

    ಹುಬ್ಬಳ್ಳಿಯ ಕರೊನಾ ವಾರಿಯರ್ ಒಬ್ಬರು ಏ. 29ರಂದು ಕೋವಿಡ್​ಗೆ ಬಲಿಯಾಗಿದ್ದಾರೆ. ಇಲ್ಲಿನ ಭವಾನಿ ನಗರ ರಾಜೇಂದ್ರ ಪ್ರಸಾದ ಕಾಲನಿ ನಿವಾಸಿ, ಕಿಮ್್ಸ ಸ್ಟಾಫ್ ನರ್ಸ್ ಸೋಫಿಯಾ ಕನವಳ್ಳಿ (45) ಅವರು ಏ. 29ರಂದು ಕೋವಿಡ್​ಗೆ ಬಲಿಯಾಗಿದ್ದಾರೆ. ಏ. 23ರಂದು ಕೋವಿಡ್ ಪಾಸಿಟಿವ್ ಆಗಿತ್ತು. ವಿಜಯಪುರದ ತಮ್ಮ ತವರುಮನೆಯಲ್ಲಿ ಹೋಂ ಐಸೋಲೇಷನ್​ನಲ್ಲಿ ಇದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪತಿ ಪೀಟರ್ ದುಃಖ ವ್ಯಕ್ತಪಡಿಸಿದ್ದಾರೆ.

    ಸೋಫಿಯಾ ಅವರು 16 ವರ್ಷಗಳಿಂದ ಕಿಮ್ಸ್​ನಲ್ಲಿ ಸ್ಟಾಫ್ ನರ್ಸ್ ಸೇವೆಗೈದವರು. ಕೋವಿಡ್ ಕರ್ತವ್ಯವನ್ನೂ ನಿರ್ವಹಿಸಿದ್ದರು. ಇದೇ ಸಂದರ್ಭದಲ್ಲಿ ಸೋಫಿಯಾ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಪತಿ ಪೀಟರ್ ಅವರಿಗೂ ಸೋಂಕು ತಗುಲಿದ್ದು, ಪುತ್ರಿಯರಿಬ್ಬರು ಮಾತ್ರ ಅದೃಷ್ಟವಶಾತ್ ಆರೋಗ್ಯವಂತ ರಾಗಿದ್ದಾರೆ. ಕೋವಿಡ್ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸೋಫಿಯಾ ಕನವಳ್ಳಿ ಅವರನ್ನು ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿದ್ದವು. ಆದರೆ, ಹಲವು ಸೋಂಕಿತರ ಜೀವ ಉಳಿಸಲು ಶ್ರಮಿಸಿದ ಸೋಫಿಯಾ ಅವರು ಇದೇ ರೋಗಕ್ಕೆ ಜೀವ ತೆತ್ತಿದ್ದಾರೆ. ಸೋಫಿಯಾ ಅವರ ಸೇವೆ ಈಗ ನೆನಪು ಮಾತ್ರ. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅವರು ದೂರವಾಣಿ ಕರೆ ಮಾಡಿ ಪೀಟರ್ ಅವರಿಗೆ ಸಾಂತ್ವನ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts