More

    ಸೇವಾ ಭಾವದಿಂದ ಮಾತ್ರ ಸಮುದಾಯದಲ್ಲಿ ಸ್ಥಾನ-ಬೀರಣ್ಣ ನಾಯಕ

    ಗೋಕರ್ಣ:ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಸೇರಿಕೊಂಡು ಸಮನ್ವಯತೆಯನ್ನು ಹೊಂದುವ ಮುಖ್ಯ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯನ್ನು ರೂಪಿಸಲಾಗಿದೆ.ಉತ್ತಮವಾದ ಸಮನ್ವಯತೆಯಿಂದ ಸೇವಾ ಭಾವ ಸಂವೃದ್ಧವಾಗಿ ಶ್ರೇಷ್ಠವಾದ ರಾಷ್ಟ್ರೀಯತೆ ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ಪನ್ನವಾಗಲು ಸಾಧ್ಯ ಎಂದು ಯಲ್ಲಾಪುರ ಕಾಲೇಜ್ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ನುಡಿದರು.

    ಮಂಗಳವಾರ ಇಲ್ಲಿನ ಭದ್ರಕಾಳಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಸೇವಾಭಾವದಿಂದ ಮಾತ್ರ ಸಮುದಾಯದಲ್ಲಿ ನಿಮ್ಮದೇ ಆದ ಸ್ಥಾನ ಪಡೆಯುವಂತಾಗುತ್ತದೆ.ಇದು ಪ್ರತಿಯೊಬ್ಬರ ಬಾಳು ಬಂಗಾರವಾಗಿಸುವ ಸಾಧನವಾಗಿದೆ ಎಂದರು.
    ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ,ಬಾಡ ಪಿಯು ಕಾಲೇಜ್ ಪ್ರಾಚಾರ್ಯ ಮೋಹನ ನಾಯಕ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಿತ ವಚನವಿತ್ತರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಸಿ.ಜಿ.ನಾಯಕ್‌ ದೊರೆ ಧ್ವಜಾರೋಹಣ ಮಾಡಿದರು.ಕಾಲೇಜ್ ಪ್ರಾಂಶುಪಾಲ ಎಸ್.ಸಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು.
    ಇದೇ ಸಮಾರಂಭದಲ್ಲಿ ತಾಲೂಕು ಆಡಳಿತದ ವತಿಯಿಂದ ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.ತಹಸೀಲ್ದಾರ ಸತೀಶ ಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಮತ್ತು ಜಿಪಂ ಯೋಜನಾಧಿಕಾರಿ ಸೂರ್ಯನಾರಾಯಣ ಭಟ್ಟ ಮಾತನಾಡಿ ಮತದಾನದ ಮಹತ್ವ ತಿಳಿಹೇಳಿದರು. ಉಪನ್ಯಾಸಕ,ಎನ್‌ಎಸ್‌ಎಸ್ ಯೋಜನಾಧಿಕಾರಿ ರಾಮಮಮೂರ್ತಿ ನಾಯಕ ಸ್ವಾಗತಿಸಿದರು.ಹಿರಿಯ ಉಪನ್ಯಾಸಕ ಎನ್.ಎಸ್.ಲಮಾಣಿ ಮುಂತಾದವರು ನಿರ್ವಹಿಸಿದರು.

    ಇದನ್ನೂ ಓದಿ:ಗೋಕರ್ಣದಲ್ಲಿ ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts