More

    ಸೆ.11ಕ್ಕೆ ತೋಳಹುಣಸೆಯಲ್ಲಿ ಅಂತರ ಶಾಲೆಗಳ ಸಂಭ್ರಮ

    ದಾವಣಗೆರೆ: ಸಮೀಪದ ತೋಳಹುಣಸೆಯ ಶಿವಗಂಗೋತ್ರಿಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯಲ್ಲಿ ಸೆ.೧೧ ರಂದು ಸಂಭ್ರಮ್-೨೦೨೨ ಮಕ್ಕಳ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದೆ ಶಾಲೆಯ ಹಿರಿಯ ಪ್ರಾಧ್ಯಾಪಕಿ ಜೆ.ಎಸ್.ವನಿತಾ ತಿಳಿಸಿದರು.
    ಪಿಎಸ್‌ಎಸ್‌ಇಎಂಆರ್ ಶಾಲೆ, ಎಸ್‌ಪಿಎಸ್‌ಎಸ್ ಪಿಯು ಕಾಲೇಜ್ ತೋಳಹುಣಸೆ, ಬಿಹೆಚ್‌ಪಿಇಎಂ ಶಾಲೆ ಹಾಗೂ ಎಸ್‌ಎಸ್‌ಎನ್‌ಪಿ ಶಾಲೆ ದಾವಣಗೆರೆ ಸಹಯೋಗದಲ್ಲಿ ಮೂರನೇ ಬಾರಿಗೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆ ಉತ್ತೇಜಿಸುವ ಹಿನ್ನೆಲೆಯಲ್ಲಿ, ಹಿರಿಯರು ಹಾಗೂಕಿರಿಯರ ವಿಬಾಗದಲ್ಲಿ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸೇರಿ 50 ಸ್ಪರ್ಧೆಗಳು ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ೬೦ ಶಾಲಾ ಕಾಲೇಜುಗಳ ಸುಮಾರು ೬ ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
    ಅಂದು ಬೆಳಿಗ್ಗೆ ೮.೩೦ ಕ್ಕೆ ಸಂಸ್ಥೆಯ ಅಧ್ಯಕ್ಷ ಎಸ್.ಎಸ್.ಗಣೇಶ್ ಕಾರ‍್ಯಕ್ರಮ ಉದ್ಘಾಟಿಸುವರು, ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು ಅಧ್ಯಕ್ಷತೆ ವಹಿಸುವರು. ಒಟ್ಟು ಸ್ಪರ್ಧೆಯಲ್ಲಿ ವಿಜೇತ ಶಾಲೆಗೆ ೧೦ ಸಾವಿರ ರೂ. ಬಹುಮಾನದ ಜತೆಗೆ ಪಾರಿತೋಷಕ ನೀಡಲಾಗುವುದು ಎಂದರು.
    ಅಧ್ಯಾಪಕ ಪಿ.ವಿ.ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts