More

    ಸೆರೆಯಾಗದ ಚಿರತೆ ಸಿಬ್ಬಂದಿಗೆ ಚಿಂತೆ!

    ಬೆಳಗಾವಿ: ಮೂರು ವಾರಗಳಿಂದ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ಹಾಗೂ ಪರಿಣತರ ಕಾರ್ಯತಂತ್ರಗಳಿಗೆ ಸೊಪ್ಪು ಹಾಕದ ಚಿರತೆ ಅನಾಯಾಸವಾಗಿ ಗಾಲ್ಫ್​ ಮೈದಾನದಲ್ಲಿ ಸುಳಿದಾಡುತ್ತಿದೆ. ಇತ್ತ ಭಾನುವಾರ ರಜಾ ದಿನವಾಗಿದ್ದರಿಂದ ಕೆಲ ಮಹಿಳೆಯರು ಚಿರತೆ ಶೋಧಿಸುವುದಾಗಿ, ಕೋಲು ಹಿಡಿದು ಗಾಲ್ಫ್​ ಮೈದಾನದ ಗೇಟ್​ ಹತ್ತಿ, ಒಳನುಗ್ಗಲು ಯತ್ನಿಸಿ ಹುಚ್ಚಾಟ ಮೆರೆದಿದ್ದಾರೆ.

    ತವರು ಜಿಲ್ಲೆಯಲ್ಲೇ ಇಷ್ಟೆಲ್ಲ ಆದರೂ ಅರಣ್ಯ ಸಚಿವ ಉಮೇಶ ಕತ್ತಿ ಗಾಲ್ಫ್​ ಮೈದಾನಕ್ಕೆ ಕನಿಷ್ಠ ಭೇಟಿಯನ್ನೂ ನೀಡದ ನಡೆ ಖಂಡಿಸಿ, ಸ್ಥಳಿಯ ಕಾಂಗ್ರೆಸ್​ ಕಾರ್ಯಕರ್ತೆಯರು ಕಾರ್ಯಾಚರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಗಾಲ್ಫ್​ ಮೈದಾನದ ಗೇಟ್​ ಹತ್ತಿ ಅಸಮಾಧಾನ ವ್ಯಕ್ತಪಡಿಸಿದರು. ಚಿರತೆ ನಮ್ಮ ಮೇಲೆ ದಾಳಿದ ಮಾಡಿದ ಬಳಿಕವಾದರೂ, ಅದನ್ನು ಹಿಡಿದು ಬೆಳಗಾವಿಗರ ಆತಂಕ ದೂರ ಮಾಡಲಿ ಎಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು. ಗುಲ್ಜಾರ್​ ಶೇಖ್​, ಸವಿತಾ ಕೋಬ್ರೆ, ಸಾರಾ ಜತ್ತಿ, ಅರ್ಚನಾ, ತಬಸುಮ್​ ಮುಲ್ಲಾ ಸೇರಿ 10 ಮಹಿಳಾ ಕಾರ್ಯಕರ್ತೆಯರು ಇದ್ದರು.

    ಜನರ ನಿದ್ದೆಗೆಡಿಸಿರುವ ಆಪರೇಷನ್​ ಚಿರತೆ 25ನೇ ದಿನಕ್ಕೆ ಕಾಲಿಟ್ಟಿದ್ದು, ಚಾಲಾಕಿ ಚಿರತೆ ಅರಣ್ಯ ಇಲಾಖೆ ಹಾಗೂ ಪರಿಣತರ ಯಾವುದೇ ತಂತ್ರಕ್ಕೂ ಜಗ್ಗದೇ ಓಡಾಡಿಕೊಂಡಿದೆ. ಅಹಿತಕರ ಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಲ್ಫ್​ ಗ್ರೌಂಡ್​ ಸುತ್ತಲಿನ 22 ಪ್ರಾಥಮಿಕ ಮತ್ತು ಶಾಲೆಗಳಿಗೆ ರಜೆ ೂಷಿಸಲಾಗಿದೆ.

    ಮುಂದುವರಿದ ಕಾರ್ಯಾಚರಣೆ: ಭಾನುವಾರವೂ ಕಾರ್ಯಾಚರಣೆ ನಡೆಸಲಾಯಿತು. ರಜಾ ದಿನವಾಗಿದ್ದರಿಂದ 80 ಜನ ಸಿಬ್ಬಂದಿಯನ್ನು ಮಾತ್ರ ಚಿರತೆಯ
    ಚಲನವಲನದ ಮೇಲೆ ನಿಗಾ ಇಡಲು ನಿಯೋಜಿಸಲಾಗಿದೆ. ಮಚಾನುಗಳ ಮೇಲಿನಿಂದಲು ಕಣ್ಗಾವಲು ಇಟ್ಟು, 8 ಸ್ಥಳಗಳಲ್ಲಿ ಬೋನುಗಳನ್ನಿಟ್ಟು ಸೆರೆಗೆ ಜಾಲ ಬೀಸಲಾಗಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರ ರ್ನಿಬಂಧಿಸಲಾಗಿದೆ. ಭಾನುವಾರ ರಾತ್ರಿಯೂ ಬೋನಿಗೆ ಬೀಳದಿದ್ದರೆ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ತಿಂಗಳು ಸಮೀಪಿಸುತ್ತಿದ್ದರೂ ಫಲ ಸಿಗದ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದು, ಚಿರತೆ ಹೆಸರಿನಲ್ಲಿ ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​, ವೀಸಾ ಎಲ್ಲವೂ ಸಿದ್ಧಪಡಿಸಿ ಕಾಲೆಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಎರಡು ಆನೆ, ಹುಕ್ಕೇರಿಯ ಹಂದಿ ಹಿಡಿಯುವ ತಂಡ, ಎಚ್​ಇಆರ್​ಎಫ್​ ರೆಸ್ಕೂ ತಂಡ ಹಾಗೂ ಪೊಲೀಸ್​ ಇಲಾಖೆ ಮತ್ತು ಅರಣ್ಯ ಇಲಾಖೆಯ ನುರಿತ ಪರಿಣತರನ್ನೊಳಗೊಂಡ 300ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ.

    ಎರಡ್ಮೂರು ದಿನಕ್ಕೊಮ್ಮೆ ಕಾಣಿಸಿಕೊಳ್ಳುತ್ತಿರುವ ಚಿರತೆಯು ಸಮೀಪದಲ್ಲೇ ಭೇಟೆಯಾಡಿ, ಆಹಾರ ಸೇವಿಸಿರುವ ಕುರುಹುಗಳು ಪತ್ತೆಯಾಗುತ್ತಲೇ ಇವೆ.
    ಅರಿವಳಿಕೆ ಚುಚ್ಚುಮದ್ದು ನೀಡಲು ಕಾಯುತ್ತಿರುವ ಶಾರ್ಪ್​ ಶೂಟರ್​ಗಳಿಗೂ ಚಿರತೆ ಸೆರೆ ಸವಾಲಾಗಿರುವುದು, ಅರಣ್ಯ ಇಲಾಖೆಗೆ ದೊಡ್ಡ ತಲೆಬಿಸಿ ತಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts