More

    ಸೂಪರ್ ಮಾರ್ಕೆಟ್​ ಓಪನ್

    ಕಲಬುರಗಿ: ಕರೊನಾ ನಡುವೆ ಜೀವನ ನಡೆಸಬೇಕಿದ್ದರಿಂದ ಲಾಕ್ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಜನಜೀವನ ಸಹಜವಾಗಿದೆ. ಸೋಮವಾರ ಸೂಪರ್ ಮಾರ್ಕೆಟ್ ಓಪನ್ ಆಗಿದ್ದು, ಬಹುತೇಕ ಎಲ್ಲ ಅಂಗಡಿ-ಮುಂಗಟ್ಟುಗಳು ವ್ಯವಹಾರ ಆರಂಭಿಸಿವೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ವಹಿವಾಟಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
    ಮಾರ್ಕೆಟ್ನಲ್ಲಿರುವ ಹೋಟೆಲ್ಗಳು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ತೆರೆದಿದ್ದು, ಮೊದಲ ದಿನ ವಹಿವಾಟು ಜೋರಾಗಿತ್ತು. 5.0 ಅನ್ಲಾಕ್ ನಿಯಮಾವಳಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಸುರಕ್ಷತಾ ನಿಯಮಗಳನ್ನು ಪಾಲಿಸುತ್ತ ನಡೆಯಬೇಕಿದೆ. ಪ್ರತಿಯೊಂದು ಸ್ಥಳದಲ್ಲಿ ದೈಹಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಎಲ್ಲಿಯಾದರೂ ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ಗಳು ಕೇಸ್ ದಾಖಲಿಸಲಿದ್ದಾರೆ.
    ಬಸ್ ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಕಿರಾಣ ಬಜಾರ್, ಬಾಂಡೆ ಬಜಾರ್, ಸರಾಫ್ ಬಜಾರ್, ಗೋಲ್ಡ್ ಹಬ್, ಕಪಡ ಬಜಾರ್, ಚೈನಾ ಬಜಾರ್ ಮೊದಲಾದ ಕಡೆ ಜನಸಂದಣಿ ಕಂಡುಬಂದಿತು. ರಸ್ತೆಗಳೆಲ್ಲ ಫುಲ್ ರಶ್ ಆಗಿದ್ದವು. ಕೆಲವೆಡೆ ಟ್ರಾಫಿಕ್ ಕಿರಿಕಿರಿಯೂ ಕಾಣಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts