More

    ಸೂಕ್ತ ಚಿಕಿತ್ಸೆಯಿಂದ ಕುಷ್ಠ ರೋಗ ಸಂಪೂರ್ಣ ಗುಣ ಸಾಧ್ಯ

    ಚಿತ್ರದುರ್ಗ: ಕುಷ್ಠರೋಗಕ್ಕೆ ತ್ವರಿತ ಚಿಕಿತ್ಸೆ ನೀಡಿದರೆ ರೋಗಿಗಳನ್ನು ಅಂಗವಿಕಲತೆ ಅಪಾಯದಿಂದ ಪಾರು ಮಾಡಬಹುದೆಂದು ಡಿಎಚ್‌ಒ ಡಾ.ಜಿ. ಪಿ.ರೇಣುಪ್ರಸಾದ್ ಹೇಳಿದರು. ಬುದ್ಧ ನಗರದ ಆರೋಗ್ಯ ಕೇಂದ್ರದದಲ್ಲಿ ಸೋಮವಾರ ಆಶಾ ಕಾರ‌್ಯಕತೆರ್ಯರಿಗೆ ಏರ್ಪಡಿಸಿದ್ದ ಕುಷ್ಠ ರೋಗ ಕುರಿತ ತರಬೇತಿ ಕಾರ‌್ಯಾಗಾರದಲ್ಲಿ ಅವರು ಮಾತನಾಡಿದರು.
    ರೋಗವನ್ನು ಶೀಘ್ರ ಪತ್ತೆ ಹಚ್ಚಿ, ಬಹುವಿಧದ ಚಿಕಿತ್ಸೆಗೆ ನೀಡಿದರೆ ರೋಗವನ್ನು ಸಂಪೂರ್ಣ ಗುಣ ಪಡಿಸಬಹುದು ಮತ್ತು ರೋಗಿ ಗಳು ಅಂಗವಿಕಲತೆಗೆ ತುತ್ತಾಗುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಆಶಾಕಾರ‌್ಯಕರ್ತೆಯರು ಕಾರ‌್ಯಾಗಾರದ ಸದ್ಭಳಕೆ ಮಾಡಿಕೊಳ್ಳ ಬೇಕೆಂದರು.
    ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ಎನ್.ಜಿ.ನಾಗರಾಜ್ ಮಾತನಾಡಿ,ಕುಷ್ಠ ರೋಗ ಶಾಪವಲ್ಲ. ಸಮಾಜದಲ್ಲಿ ರೋಗಿಗಳನ್ನ ನೋಡುವ ರೀತಿ ಬದಲಾಗಬೇಕು. ಈಚೆಗೆ ಈ ಪೂರ್ವಾಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು,ರೋಗದ ಸಂಪೂರ್ಣ ನಿ ರ್ಮೂಲನೆಯತ್ತ ನಾವು ಸಾಗುತ್ತಿದ್ದೇವೆ ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋ ಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ತಿಪ್ಪೇಶ್ ಮಾತನಾಡಿದರು. ವೈದ್ಯಾಧಿಕಾರಿ ಡಾ.ಸುರೇಂದ್ರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪುನೀತ್, ಗುರುಮೂರ್ತಿ, ಜಿಲ್ಲಾ ಆಶಾ ಬೋಧಕಿ ಪೂರ್ಣಿಮಾ ಮತ್ತಿತರರು ಇದ್ದರು.


    (ಸಿಟಿಡಿ 6 ಕುಷ್ಠ)
    ಚಿತ್ರದುರ್ಗದಲ್ಲಿ ಸೋಮವಾರ ಆಶಾ ಕಾರ‌್ಯಕರ್ತರಿಗೆ ಏರ್ಪಡಿಸಿದ್ದ ಕುಷ್ಠ ರೋಗ ಕುರಿತ ತರಬೇತಿ ಕಾರ‌್ಯಾಗಾರದಲ್ಲಿ ಡಿಎಚ್‌ಒ ಡಾ. ಜಿ.ಪಿ.ರೇಣುಪ್ರಸಾದ್ ಮಾತನಾಡಿದರು. ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ಎನ್.ಜಿ.ನಾಗರಾಜ್,ಡಾ.ಬಿ.ವಿ.ಗಿರೀಶ್, ಎನ್.ಎಸ್. ಮಂಜುನಾಥ್,ಬಿ.ಮೂಗಪ್ಪ, ವೈ.ತಿಪ್ಪೇಶ್,ಡಾ.ಸುರೇಂದ್ರ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts