More

    ಸುಸ್ಥಿರ ಅಭಿವೃದ್ಧಿಯತ್ತ ಗ್ರಾಮ ಕೊಂಡೊಯ್ಯಿರಿ

    ಸವದತ್ತಿ, ಬೆಳಗಾವಿ: ಕೇವಲ ರಸ್ತೆ, ಚರಂಡಿಯನ್ನು ನಿರ್ಮಿಸಿದರೆ ಸಾಲದು, ಗ್ರಾಮದಲ್ಲಿನ ವಿವಿಧ ಸಮಸ್ಯೆ ಪರಿಹರಿಸಿ ಸುಸ್ಥಿರ ಅಭಿವೃದ್ಧಿಯತ್ತ ಗ್ರಾಮವನ್ನು ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಇಒ ಯಶವಂತಕುಮಾರ ಸಲಹೆ ನೀಡಿದರು.

    ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಭವಿಷ್ಯತ್ತಿನಲ್ಲಿ ಉದ್ಭವಿಸುವಂತಹ ಸಮಸ್ಯೆಗಳ ಕುರಿತು ಇಂದೇ ಯೋಚಿಸಿ, ಸಂಪನ್ಮೂಲ ಮತ್ತು ಅನುದಾನದ ಸದ್ಬಳಕೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಯೋಜನೆ ಇದಾಗಿದೆ. ಮುಂದಿನ 5 ವರ್ಷಗಳಲ್ಲಿ ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಶಾಸ್ವತ ಪರಿಹಾರದ ಯೋಜನೆ ರೂಪಿಸಿ ಸುಸ್ಥಿರ ಅಭಿವೃದ್ಧಿ ಕಾಣಬೇಕಿದೆ. ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿಯೆ ಜಿಪಿಡಿಪಿ ಮುಖ್ಯ ಉದ್ದೇಶವಾಗಿದೆ ಎಂದರು.

    ಗ್ರಾಮೀಣ ಅಭಿವೃದ್ಧಿಗಾಗಿ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ತರಬೇತಿ ಅಗತ್ಯವಾಗಿದೆ. ಸಮಸ್ಯೆಗಳ ಆದ್ಯತೆ ಮೇರೆಗೆ ಯೋಜನೆ ರೂಪಿಸಿ ಪರಿಹರಿಸುವ
    ಕಾರ್ಯ ನಿರಂತರ ನಡೆಯಲಿದೆ. ಶಿಬಿರದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಗ್ರಾಮಗಳ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ನರೇಗಾ ಎಡಿ ಎಸ್.ಎಸ್.
    ಹಂದ್ರಾಳ ಮಾತನಾಡಿ, ಗ್ರಾಮೀಣದ ಸಮಸ್ಯೆಯನ್ನು ಗ್ರಾಮದಲ್ಲಿಯೇ ಪರಿಹರಿಸಲೆಂದು ಅಧಿಕಾರ ವಿಕೇಂದ್ರಿಕರಣಕ್ಕೆ ಪಂಚಾಯತ್ ರಾಜ್ ಇಲಾಖೆಯನ್ನು ಶಾಸನ ಬದ್ಧವಾಗಿ ಸೃಷ್ಟಿಸಿದ್ದು, ಗ್ರಾಮೀಣರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಹಕಾರಿಯಾಗಿದೆ. ನಗರ ಪ್ರದೇಶಗಳಲ್ಲಿರದ ಸೌಲಭ್ಯಗಳು ಮತ್ತು ಅನುದಾನ ಗ್ರಾಮೀಣ ಭಾಗಕ್ಕೆ ಸಿಗುತ್ತಿದ್ದು, 26 ಇಲಾಖೆಗಳ ಯೋಜನೆಗಳ ಸಹಕಾರದಿಂದ ಅನುದಾನ ಸದ್ಬಳಕೆಯಾಗಲಿದೆ. ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು. ಡಾ.ಮಾರುತಿ ಚೌಡಕ್ಕನವರ, ಆರ್.ಎ.ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts