More

    ಸುಸಂಸ್ಕೃತ ಸಮಾಜ ನಿರ್ಮಿಸಲು ಶ್ರಮಿಸಿ

    ಗೋಕಾಕ: ಯುವ ಪೀಳಿಗೆಗೆ ಹಿರಿಯ ಜೀವಿಗಳು ತಮ್ಮ ಅನುಭವದ ಜ್ಞಾನ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಿ ಎಂದು ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.

    ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಗೋಕಾಕ ರೋಟರಿ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 75 ವಸಂತ ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಭಾರತೀಯ ಸಂಸ್ಕೃತಿ ಅತ್ಯಂತ ಪವಿತ್ರವಾದದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಯಿಂದಿರು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಬೆಳೆಸಿ ಉತ್ತಮ ನಾಗರಿಕರನ್ನಾಗಿಸಿ ದೇಶಕ್ಕೆ ಕೊಡುಗೆ ನೀಡಿ. ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹನೆಯಿಂದ ಕೂಡಿ ಬಾಳಿದರೆ ಮನೆ ಸ್ವರ್ಗವಾಗುವುದು. ಯುವ ಜನತೆಯಲ್ಲಿ ದೇಶಾಭಿಮಾನ, ತಂದೆ ತಾಯಿಗಳಿಗೆ ಗೌರವ ನೀಡುವ ಅರಿವು ಮೂಡಿಸುವಂತೆ ಕರೆ ನೀಡಿದರು.
    ದಿವ್ಯ ಸಾನ್ನಿಧ್ಯ ವಹಿಸಿದ್ದ ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ಸ್ವಸ್ಥ, ಸ್ವಚ್ಛ ಹಾಗೂ ಶಿಸ್ತುಬದ್ಧ ಸಮಾಜ ನಿರ್ಮಿಸುವ ಉದ್ದೇಶದಿಂದ ರೋಟರಿ ಸಂಸ್ಥೆ ಅವರ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದರು.

    ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ವರದಾಯಿ, ಕಾರ್ಯದರ್ಶಿ ದಿಲೀಪ ಮೆಳವಂಕಿ, ರೋಟರಿ ಸೇವಾ ಸಂಘದ ಚೇರ್ಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ, ಕಾರ್ಯದರ್ಶಿ ಸೋಮಶೇಖರ್, ಮಗದುಮ್ಮ, ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವರದಾಯಿ, ಕಾರ್ಯದರ್ಶಿ ವಿದ್ಯಾ ಗುಲ್, ವಿದ್ಯಾ ಮಗದುಮ್ಮ, ಸತೀಶ ನಾಡಗೌಡ, ಮಹಾಂತೇಶ ತಾಂವಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts