More

    ಸೀಲ್​ಡೌನ್ ಪ್ರದೇಶದಲ್ಲಿ ಕಟ್ಟೆಚ್ಚರ

    ಹುಬ್ಬಳ್ಳಿ: ಕರೊನಾ ಸೋಂಕಿನ ವಿಷಯದಲ್ಲಿ ಇದುವರೆಗೆ ಮುಲ್ಲಾ ಹಾಗೂ ಕರಾಡಿ ಓಣಿಯತ್ತಲೇ ನೆಟ್ಟಿದ್ದ ಎಲ್ಲರ ಚಿತ್ತ, ಈಗ ಇತರ ಕಡೆಗೂ ಹರಿಯುವಂತಾಗಿದ್ದು, ಏನೇನಾಗಲಿದೆಯೋ ಎಂಬ ಆತಂಕ ಹೆಚ್ಚುತ್ತಿದೆ.

    57 ವರ್ಷದ ಕರೊನಾ ಸೋಂಕಿತ ವ್ಯಕ್ತಿ (ಪಿ-589) ವಾಸವಿದ್ದ ಕೇಶ್ವಾಪುರ ಶಾಂತಿ ನಗರದಲ್ಲಿ ಭಯದ ವಾತಾವರಣ ನಿರ್ವಣವಾಗಿದೆ. ಸದ್ಯ ಕಂಟೈನ್ಮೆಂಟ್ ಹಾಗೂ ಸೀಲ್​ಡೌನ್ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಜನರು ಹೊರಬರದಂತೆ ಕಟ್ಟೆಚ್ಚರ ವಿಧಿಸಿದೆ.

    ಈ ಪ್ರದೇಶದಲ್ಲಿ 450 ಮನೆಗಳಿದ್ದು, 2250 ಜನರು ವಾಸ ಮಾಡುತ್ತಿದ್ದಾರೆ. ಇದರ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್​ಡೌನ್ ಎಂದು ಗುರುತಿಸಲಾಗಿದ್ದು, ಪೂರ್ವಕ್ಕೆ ಹಳಿಯಾಳ ಅಪಾರ್ಟ್​ವೆುಂಟ್(ಬಾಲಾಜಿ ನಗರ), ಪಶ್ಚಿಮಕ್ಕೆ ಶೆಟ್ಟರ್ ಕಾಲನಿ ಗಾರ್ಡನ್ ದ್ವಾರ, ಉತ್ತರಕ್ಕೆ ಶೈನಾಜ್ ಹಸನ್ ಬಿಲ್ಡಿಂಗ್, ಆಜಾದ್ ಹೌಸಿಂಗ್ ಸೊಸೈಟಿ, ದಕ್ಷಿಣಕ್ಕೆ ಹನುಮಾನ ಮಂದಿರ (ರಾಘವೇಂದ್ರ ಕಾಲನಿ) ಎಂದು ಗುರುತಿಸಲಾಗಿದೆ. ಇದರ ವ್ಯಾಪ್ತಿಯಲ್ಲಿರು 15 ವಿವಿಧ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. 1 ಕಿ.ಮೀ. ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಎಂದು ಗುರುತಿಸಲಾಗಿದೆ. ಪೂರ್ವಕ್ಕೆ ಸಂಗಿನಿ ವಿಲ್ಲಾ, ಅಕ್ಷಯ ಪಾರ್ಕ್ (ವಾರ್ಡ್ 31), ಪಶ್ಚಿಮಕ್ಕೆ ವಿಜಯ ನಗರ, ತಿರುಪತಿ ಬಜಾರ್ (ವಾರ್ಡ್ 33), ಉತ್ತರಕ್ಕೆ ಸಿದ್ವೀರ ಮಂದಿರ, ಗೋಪನಕೊಪ್ಪದ ಕೊನೆಯ ಬಸ್ ನಿಲ್ದಾಣ(ವಾರ್ಡ್ 30), ದಕ್ಷಿಣಕ್ಕೆ ಸವೋದಯ ಸರ್ಕಲ್, ಕೇಶ್ವಾಪುರ (ವಾರ್ಡ್ 32) ಎಂದು ನಿಗದಿಪಡಿಸಲಾಗಿದೆ.

    ಈ ಪ್ರದೇಶಕ್ಕೆ ಘಟನಾ ಕಮಾಂಡರ್ ಆಗಿ ಆನಂದ ಕಾಂಬಳೆ ಅವರನ್ನು ನೇಮಿಸಲಾಗಿದೆ. ಪೊಲೀಸ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ 24 ಗಂಟೆ ಕಾರ್ಯನಿರ್ವಹಣೆ ಮಾಡಬೇಕು. ದಿನಸಿ, ಮಾಂಸ, ಹಾಲು, ಎಲ್​ಪಿಜಿ ಅನಿಲ ಹಾಗೂ ಔಷಧ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಪಡಿತರ ಚೀಟಿ ಹೊಂದಿದವರ ಮನೆ ಬಾಗಿಲಿಗೆ ಆಹಾರ ಧಾನ್ಯವನ್ನು ನ್ಯಾಯ ಬೆಲೆ ಅಂಗಡಿಯವರು ತಲುಪಿಸಬೇಕು. ಆದೇಶ ಉಲ್ಲಂಘಿಸಿದರೆ ಕೋವಿಡ್ 19 ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts