More

    ಸೀಬೆಯಿಂದ ಉತ್ತಮ ಆದಾಯಗಳಿಸುತ್ತಿರುವ ತಿಪ್ಪೀರಮ್ಮ

    ಚಿತ್ರದುರ್ಗ:ಚಳ್ಳಕೆರೆ ತಾಲೂಕು ರಾಮಸಾಗರದ ತಿಪ್ಪೀರಮ್ಮಪಾಲಯ್ಯ ಅವರು ಸೀಬೆ ಬೆಳೆದು ಉತ್ತಮ ಆದಾಯಗಳಿಸುತ್ತಿರುವ ರೈತ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಏಳು ಎಕರೆ ಜಮೀನಿನಲ್ಲಿ ಈ ಹಿಂದೆ ಅತ್ಯಲ್ಪ ನೀರಿನಲ್ಲಿ ಈರುಳ್ಳಿ,ಟೊಮೊಟೊ,ರಾಗಿ ಬೆಳೆಯುತ್ತಿದ್ದ ಇವರು,ಕಡಿಮೆ ನೀರನ್ನು ಬಯಸುವ ಖುಷ್ಕಿ ತೋಟಗಾರಿಕೆ ಬೆಳೆ,ಸೀಬೆ ಬೆಳೆಯಲು ನಿರ್ಧರಿಸಿದರು.

    ಇದಕ್ಕಾಗಿ ತೋಟಗಾರಿಕೆ ಇಲಾಖೆಯ ನರೇಗಾ ಸೌಲಭ್ಯವನ್ನು ಬಳಸಿಕೊಂಡು 2.20ಎಕರೆಯಲ್ಲಿ ತೈವಾನ್‌ಪಿಂಕ್ ತಳಿಯ ಸೀಬೆ ಬೆಳೆದಿದ್ದಾರೆ.
    ವಿಜಯಪುರದಿಂದ ಪ್ರತಿ ಸಸಿಗೆ 45ರೂ.ಗಳಂತೆ ಖರೀದಿಸಿ,5/5 ಮೀ.ಅಂತರದಲ್ಲಿ ಅವುಗಳನ್ನು ನೆಟ್ಟು ಆರೈಕೆ ಮಾಡಿದ್ದಾರೆ. ಈಗ ಒಂದು ವ ರ್ಷದ ಗಿಡಗಳಲ್ಲಿ 1200 ಕೆ.ಜಿ.ಸೀಬೆಯ ಹಣ್ಣನ್ನು ಕಟಾವು ಸ್ಥಳೀಯ ಗ್ರಾಮಗಳು,ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ ಮಾರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಇಳುವರಿಯ ನೀರಿಕ್ಷೆಯಲ್ಲಿದ್ದಾರೆಂದು ತೋಟಗಾರಿಕೆ ಇಲಾಖೆ ಡಿಡಿ ಸವಿತಾ ತಿಳಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts