More

    ಸಿವಿಲ್‌ಗೆ ಮರಳಲು ಲೋಕಾಯುಕ್ತ ಪೊಲೀಸರ ಒಲವು?

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

    ಕರ್ನಾಟಕ ಲೋಕಾಯುಕ್ತ ಮರು ಸ್ಥಾಪನೆ ಬಳಿಕ ಅಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಯಿತೆ?
    ನಮ್ಮನ್ನು ಸಿವಿಲ್ ಪೊಲೀಸ್‌ಗೆ ಮರಳಿ ಕಳುಹಿಸಿ ಎಂದು ಕೋರಿಕೆ ಸಲ್ಲಿಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನಡೆ ಈ ಪ್ರಶ್ನೆ ಹುಟ್ಟುಹಾಕಿದೆ.
    ಕಳೆದ ಆಗಸ್ಟ್‌ನಲ್ಲಿ ಲೋಕಾಯುಕ್ತ ರಾಜ್ಯದಲ್ಲಿ ಮರು ಜನ್ಮ ತಾಳಿದೆ. ಅಂದಿನಿಂದ ಹೊಸ ಹುರುಪು, ಹೆಚ್ಚಿನ ದಕ್ಷತೆಯೊಂದಿಗೆ ಭ್ರಷ್ಟರ ಹೆಡೆಮುರಿ ಕಟ್ಟುವ ಕೆಲಸದಲ್ಲಿ ಯಶಸ್ವಿ ಕೂಡ ಆಗುತ್ತಿದೆ. ಹಲವರ ವಿರುದ್ಧ ತನಿಖೆಯೂ ನಡೆಯುತ್ತಿದೆ.
    ಇಷ್ಟರ ನಡುವೆ ಕೆಲಸದ ಭಾರದಿಂದಾಗಿ ಎಸ್‌ಪಿ-ಇನ್ಸ್‌ಪೆಕ್ಟರ್‌ವರೆಗಿನ ನಾನಾ ದರ್ಜೆ 65 ಕ್ಕೂ ಹೆಚ್ಚು ಅಧಿಕಾರಿಗಳು ಮೊದಲಿನ ಕರ್ತವ್ಯಕ್ಕೆ ವಾಪಸು ಕಳಿಸಿ ಎಂಬ ಕೋರಿಕೆ ಇಟ್ಟಿದ್ದಾರೆಂಬ ಮಾತು ಕೇಳಿ ಬಂದಿದೆ.
    ಈ ಮೊದಲು ಲೋಕಾಯುಕ್ತ ಕರ್ತವ್ಯಕ್ಕೆ ನಿಯೋಜಿಸುವಂತೆ ಕೋರಿ ಆಸಕ್ತ ಪೊಲೀಸರು ವಾಲಂಟರಿಯಾಗಿ ಬರೆದುಕೊಡಬೇಕಿತ್ತಂತೆ. ಅವರ ಸರ್ವಿಸ್ ಹಿಸ್ಟರಿ ಪರಿಶೀಲಿಸಿ ಲೋಕಾಯುಕ್ತಕ್ಕೆ ವರ್ಗಾಯಿಸಲಾಗುತ್ತಂತೆ. ಆದರೆ ಈಗ ಗೃಹ ಇಲಾಖೆ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದರೂ, ಅನೇಕರು ನಿಯೋಜಿತ ಸ್ಥಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರಂತೆ.
    *ಪಿಎಸ್‌ಒ ವಿಳಂಬ: ಕೋರ್ಟ್-ಕಚೇರಿ ಕೆಲಸಗಳಿಗೆ ಸೂಕ್ತ ಸಮಯಾವಕಾಶ ಸಿಗದಿರುವುದು, ಕೊಂಚ ಲೋಪವಾದರೂ ಪೊಲೀಸ್‌ವಿಂಗ್ ಹೊಣೆಯಾ ಗ ಬೇಕಾಗಿರುವುದು ಅಧಿಕಾರಿಗಳ ಹಿಂದೇಟಿಗೆ ಒಂದು ಕಾರಣವಾದರೆ, ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಮುಖ್ಯಕಚೇರಿ ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳಿಂದ ಸೂಕ್ತ ಸಮಯದೊಳಗೆ ಪಿಎಸ್‌ಒ ಸಿಗದಿರುವುದು, ಪಿಸಿ ಆ್ಯಕ್ಟ್ ಮತ್ತು ಐಪಿಸಿ ಆ್ಯಕ್ಟ್‌ನಡಿ ಚಾರ್ಜ್‌ಶೀಟ್ ವಿಳಂಬವಾಗುತ್ತಿರುವುದು ಅಧಿಕಾರಿಗಳ ಮೇಲಿನ ಒತ್ತಡಕ್ಕೆ ಕಾರಣವೆಂಬ ವಿಶ್ಲೇಷಣೆ ಕೂಡ ಇದೆ.
    *ಪ್ರಶಂಸನಾ ಪತ್ರ: ಕಳೆದ ಆಗಸ್ಟ್‌ನಿಂದ ಈವರೆಗೆ ಅಂದಾಜು 200 ಟ್ರಾೃಪ್ ಕೇಸ್‌ಗಳಾಗಿವೆ. 2014 ರಿಂದ 2021 ರವರೆಗೆ ಇದ್ದ ದಾಳಿ ಕೇಸ್‌ಗಳನ್ನು ತಾರ್ಕಿಕ ಹಂತಕ್ಕೆ ತಲುಪಿಸಲಾಗುತ್ತಿದೆ. ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ನೇರ ಬಿಸಿ ಮುಟ್ಟಿಸಿ, ಜನರಿಗೆ ಅನುಕೂಲ ಒದಗಿಸುತ್ತಿ ರುವ ಹಲವು ಅಧಿಕಾರಿಗಳ ಪ್ರಯತ್ನಕ್ಕೆ ಪ್ರಶಂಸನಾ ಪತ್ರದ ಪ್ರೋತ್ಸಾಹವೂ ಸಿಗುತ್ತಿದೆ.
    *25 ಸಾವಿರ ಅರ್ಜಿಗಳು: ಆದರೆ ಮಿಸ್ ಕಂಡಕ್ಟ್‌ಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಪಿ, ಠಾಣೆಗಳಿಗೆ ಬಂದಂಥ ಹಾಗೂ ಎಸಿಬಿಯಿಂದ ವರ್ಗಾವಣೆಯಾ ದವು ಸೇರಿ 25 ಸಾವಿರಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಅಥವಾ ತನಿಖೆಗೆ, ಅನುಮತಿ ವಿಳಂಬವಾಗುತ್ತಿರುವುದು ಅಧಿಕಾರಿಗಳನ್ನು ಇಕ್ಕ ಟ್ಟಿಗೆ ಸಿಲುಕಿಸುತ್ತಿದೆಯಂತೆ.
    *ವಾಹನಗಳ ಕೋರಿಕೆಗೆ ಇಲ್ಲ ಮಾನ್ಯತೆ:
    32 ಎಸ್‌ಪಿ ಹುದ್ದೆಗಳು ಭರ್ತಿ ಇದ್ದರೂ ಹಲವು ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಯಾಗಬೇಕಿದೆ. ಅಧಿಕಾರಿ-ಸಿಬ್ಬಂದಿ ಕೊ ರತೆ ಇಲ್ಲ. ಆದರೆ, 240 ಕ್ಕೂ ಹೆಚ್ಚು ಹೊಸ ವಾಹನಗಳು ಬೇಕೆಂಬ 8-10 ತಿಂಗಳ ಕೋರಿಕೆಯನ್ನು ಸರ್ಕಾರ ಈವರೆಗೂ ಮಾನ್ಯ ಮಾಡಿಲ್ಲ ವೆಂಬ ಮಾತು ವಲಯದಲ್ಲಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts