More

    ಸಿಬಿಐ ದಾಳಿ ಪೂರ್ವಯೋಜಿತ

    ಲಕ್ಷ್ಮೇಶ್ವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮನೆ ಮತ್ತು ಕಚೇರಿಗಳ ಮೇಲಿನ ಸಿಬಿಐ ದಾಳಿ ಪೂರ್ವ ಯೋಜಿತವಾಗಿದ್ದು ಇದು ಬಿಜೆಪಿ ದ್ವೇಷ ರಾಜಕಾರಣದ ಪ್ರತೀಕವಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.

    ಪಟ್ಟಣದ ಶಿಗ್ಲಿ ನಾಕಾ ಬಳಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಿಎಸ್​ವೈ ಪುತ್ರರ ಭ್ರಷ್ಟಾಚಾರ ಪ್ರಕರಣಗಳನ್ನು ಮರೆಮಾಚುವ ಮತ್ತು ಕಾಂಗ್ರೆಸ್ ಪಕ್ಷದ ಆತ್ಮಸ್ಥೈರ್ಯ ಕುಗ್ಗಿಸುವ ಹುನ್ನಾರ ಬಿಜೆಪಿಯದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಸಿಬಿಐ, ಇಡಿ ಸಂಸ್ಥೆಗಳನ್ನು ತಮ್ಮ ಕೈಗೊಂಬೆಯಂತೆ ಬಳಸಿಕೊಳ್ಳುತ್ತದೆ. ಡಿ.ಕೆ. ಶಿವಕುಮಾರ ಅವರ ಮೇಲೆ ಪದೇ ಪದೆ ಸಿಬಿಐ ದಾಳಿ ಮಾಡಿ ಅವರ ನೈತಿಕ ಬಲ ಕುಗ್ಗುವಂತೆ ಮಾಡುವ ಬಿಜೆಪಿಯವರ ಹುನ್ನಾರ ಜನರಿಗೆ ತಿಳಿದಿದ್ದು ಬಿಜೆಪಿ ದ್ವೇಷ ಕಾರಣಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

    ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸೇರಿ ಬಿಜೆಪಿಯ ಅನೇಕರ ಮೇಲೆ ದೂರುಗಳಿದ್ದರೂ, ಅವರ ಮೇಲೆ ಸಿಬಿಐ ದಾಳಿ ಯಾಕಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಹಾಕಿಕೊಳ್ಳಲು ಈ ರೀತಿ ಅನಗತ್ಯ ದಾಳಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಇದಕ್ಕೆ ನಮ್ಮ ಪಕ್ಷ ಹಾಗೂ ಪಕ್ಷದ ಮುಖಂಡರು ಹೆದರುವ ಪ್ರಶ್ನೆಯೇ ಇಲ್ಲ. ಇದು ಹೀಗೆ ಮುಂದುವರೆದರೆ ಬೀದಿ ಬೀದಿಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

    ಜಿ.ಪಂ. ಸದಸ್ಯ ಎಸ್.ಪಿ. ಬಳಿಗಾರ, ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ತಾ.ಪಂ. ಮಾಜಿ ಸದಸ್ಯ ಚನ್ನಪ್ಪ ಜಗಲಿ, ಜಯಕ್ಕ ಕಳ್ಳಿ, ರಾಮಣ್ಣ ಲಮಾಣಿ(ಶಿಗ್ಲಿ), ವೀರೇಂದ್ರ ಪಾಟೀಲ, ವಿರುಪಾಕ್ಷ ನಂದೆಣ್ಣವರ, ವಿ.ಜಿ. ಪಡಗೇರಿ, ಭಾಗ್ಯಶ್ರೀ ಬಾಬಣ್ಣ, ಅಮರೇಶ ತೆಂಬದಮನಿ, ಬಾಬು ಅಳವಂಡಿ, ರಾಮಣ್ಣ ಗಡದವರ, ಫಕ್ಕೀರೇಶ ನಂದೆಣ್ಣವರ, ವಿಜಯ ಕರಡಿ, ಎಸ್.ಕೆ. ಹವಾಲ್ದಾರ, ನೀಲಪ್ಪ ಪಡಗೇರಿ ಸೇರಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts