More

    ಸಿದ್ಧರಾಮೇಶ್ವರ ಕೊಡುಗೆ ಅಪಾರ


    ಗಜೇಂದ್ರಗಡ: 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕಾಂತ್ರಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಕೊಡುಗೆ ಅಪಾರ. ಅವರ ತತ್ವಾದರ್ಶಗಳನ್ನು ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭೋವಿ ಸಮಾಜದ ಮುಖಂಡ ಶರಣಪ್ಪ ಚಳಗೇರಿ ಹೇಳಿದರು.

    ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಭೋವಿ ಸಮಾಜದ ವತಿಯಿಂದ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಆಳವಾಗಿ ಬೇರೂರಿದ್ದ ಕಂದಾಚಾರ ಹಾಗೂ ಮೂಢ ನಂಬಿಕೆಗಳ ವಿರುದ್ಧ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಶಿವಯೋಗಿ ಸಿದ್ಧರಾಮೇಶ್ವರರು ಕರ್ಮಯೋಗದ ಮೂಲಕ ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದಾರೆ. ಕಾಯಕ ನಿಷ್ಠೆಗೆ ಹೆಸರಾದ ಬಸವಾದಿ ಶರಣರು ತಮ್ಮ ವಚನ ಭಂಡಾರದ ಮೂಲಕ ಸಮಾಜದ ಅಭ್ಯುದಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜ್ಞಾನಯೋಗ, ಭಕ್ತಿಯೋಗ ಹಾಗೂ ಕರ್ಮಯೋಗಕ್ಕೆ ಶಿವಯೋಗಿ ಸಿದ್ಧರಾಮೇಶ್ವರರು ಉತ್ತಮ ನಿರ್ದಶನವಾಗಿದ್ದಾರೆ ಎಂದರು.

    ಸಮಾಜದ ಅಧ್ಯಕ್ಷ ಯಲ್ಲಪ್ಪ ಬಂಕದ ಮಾತನಾಡಿ, ಸಿದ್ಧರಾಮೇಶ್ವರರು ಸಮಾಜದಲ್ಲಿನ ಮೇಲು ಕೀಳು, ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದರು. ತಮ್ಮ ಅಪಾರ ಶಿಷ್ಯರೊಂದಿಗೆ ದೇವಾಲಯ, ಬಾವಿ, ಕೆರೆಗಳ ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಭೋವಿ ಸಮಾಜವು ಕಾಯಕ ತತ್ವವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

    ಸ್ಥಳೀಯ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಚನ್ನಮ್ಮ ವೃತ್ತ, ಪುರಸಭೆ, ವಡ್ಡರ ಓಣಿ, ಮೌಲಾಲಿ ಮಸೂತಿ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಅಗಸಿ ಬಾಗಿಲು ಮೂಲಕ ದೇವಸ್ಥಾನ ತಲುಪಿತು.

    ಬಸವರಾಜ ಬಂಕದ, ಮುದಿಯಪ್ಪ ಮುಧೋಳ, ಮಾರುತಿ ಕಲ್ಲೊಡ್ಡರ, ದುರಗಪ್ಪ ಮುಧೋಳ, ಷಣ್ಮುಖಪ್ಪ ನಿಡಗುಂದಿ, ಷಣ್ಮುಖಪ್ಪ ಚಿಲ್​ರೆರಿ, ನೇಮಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಲಕ್ಕಲಕಟ್ಟಿ, ಶೇಖಪ್ಪ ಬಿಸನಳ್ಳಿ, ಗಿಡ್ಡಪ್ಪ ಪೂಜಾರ, ಯಮನೂರಪ್ಪ ಲಕ್ಕಲಕಟ್ಟಿ, ಮುದಿಯಪ್ಪ ಕೊಡಗಾನೂರ, ಮೂಕಪ್ಪ ಗುಡೂರ, ತಿರುಪತಿ ಕಲ್ಲೊಡ್ಡರ, ಪ್ರಭು ನಿಡಗುಂದಿ, ಮಂಜುನಾಥ ಚಳಗೇರಿ, ವೆಂಕಟೇಶ ಬಂಕದ, ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts