More

    ಸಿಎಂ ಭೇಟಿಗಾಗಿ 60 ಕಿ.ಮೀ ಪಾದಯಾತ್ರೆ ಹೊರಟ ಶ್ರಮಿಕ ವಾಸಿಗಳು

    ಮಂಡ್ಯ: ನಗರದ ಆರ್‌ಟಿಇ ಕಚೇರಿ ಎದುರಿನ ಕಾಳಪ್ಪ ಬಡಾವಣೆಯ ಜಾಗದ ವಿಚಾರವನ್ನು ಇತ್ಯರ್ಥಗೊಳಿಸಿ ಅಂತಿಮ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಮಂಗಳವಾರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.


    ಜು.14ರಿಂದ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಅಂತೆಯೇ ಜು.21ರಂದು ಕೆ.ಆರ್.ಪೇಟೆಗೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲು ಪಾದಯಾತ್ರೆ ಮೂಲಕ ತೆರಳಲಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವುದಿಲ್ಲವೆಂಬ ನಿಯಮಕ್ಕೆ ಒಳಪಟ್ಟು ಪಾದಯಾತ್ರೆ ಮುಂದುವರೆಸಲಾಯಿತು. ಗುರುವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರಮಿಕ ನಗರ ನಿವಾಸಿಗಳು ಮನವಿ ಸಲ್ಲಿಸಲಿದ್ದಾರೆ.


    ಪಾದಯಾತ್ರೆಯಲ್ಲಿ ಆರ್ಮುಂಗಮ್, ಸುಬ್ರಮಣ್ಯ, ಜ್ಯೋತಿ, ತುಳಸಮ್ಮ, ನಾಗೇಶ್, ಸಿದ್ದರಾಜು, ಕಮಲಾ, ಅಂಜಲಿ, ಶಿಲ್ಪಾ, ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts