More

    ಸಿಂದಗಿಯಲ್ಲಿ ಮೂಕ ಪ್ರಾಣಿಗಳ ರೋದನ, ಒಳಚರಂಡಿ ಕಾಮಗಾರಿ ಅವೈಜ್ಞಾನಿಕ, ಪುರಸಭೆಗೆ ಹೇಳೋರು…ಕೇಳೋರಿಲ್ಲವೇ?

    ವಿಜಯಪುರ: ಒಳಚರಂಡಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೂಕ ಪ್ರಾಣಿಗಳು ಸಾವಿಗೀಡಾಗುತ್ತಿದ್ದು, ಪುರಸಭೆ ಅಧಿಕಾರಿಗಳಿಗೆ ಜನ ಶಾಪ ಹಾಕುತ್ತಿದ್ದಾರೆ.
    ಸಿಂದಗಿ ಪಟ್ಟಣದಲ್ಲಿ ಪುರಸಭೆಯಿಂದ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ನಗರದ ತುಂಬ ಎಲ್ಲೆಂದರಲ್ಲಿ ಅಗೆದು ಗುಂಡಿ ತೋಡಿ ಬಿಡಲಾಗಿದೆ. ಇದರಿಂದಾಗಿ ಬೀಡಾಡಿ ದನಗಳು ಗುಂಡಿಗೆ ಬೀಳುತ್ತಿವೆ. ಈಗಾಗಲೇ ಎರಡು ಆಕಳು ಅಸುನೀಗಿದ್ದು, ಆರು ಆಕಳುಗಳನ್ನು ಗುಂಡಿಯಿಂದ ಮೇಲೆತ್ತಲಾಗಿದೆ.
    ಶನಿವಾರ ನಸುಕಿನ ಜಾವ ಬಸವೇಶ್ವರ ವೃತ್ತದ ಹತ್ತಿರ ಅಗೆದ ಆಳ ತಗ್ಗಿನಲ್ಲಿ ಬೀಡಾಡಿ ದನ ಬಿದ್ದಿದೆ. ಹಲವು ಗಂಟೆಗಳ ಕಾಲ ದನದ ಆರ್ತನಾದಕ್ಕೆ ಜನ ಮರುಕ ಪಟ್ಟಿದ್ದಾರೆ. ಬಳಿಕ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ, ಹನಮಂತ ಹಚ್ಯಾಳ, ಸಿದ್ದರಾಯ ಪಾರ್ಥನಳ್ಳಿ, ಮಾಲಕಣ್ಣ ತೆಗ್ಗೆಳ್ಳಿ, ಸಿದ್ದಣ್ಣ ರೋಡಗಿ, ಮಹಾಂತೇಶ ಜಾಲಿಹಾಳ, ಮುತ್ತುರಾಜ ಹುಣಸಗಿ, ಹನಮಂತಪ್ಪ ಕುಂಬಾರ ಮತ್ತಿತರರು ಕಾರ್ಯಾಚರಣೆ ನಡೆಸಿದ್ದಾರೆ. ಒಂದು ಗಂಟೆ ಕಾರ್ಯಾಚರಣೆ ಬಳಿಕ ದನ ಮೇಲೆತ್ತಲಾಗಿದೆ.
    ಆದರೆ, ಪುರಸಭೆ ಅಧಿಕಾರಿಗಳು ಮಾತ್ರ ಮೂಕ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಗೆದು ಬಿಟ್ಟ ಗುಂಡಿ ಸುತ್ತ ಬ್ಯಾರಿಕೇಡ್ ಆಗಲಿ, ಮುಳ್ಳು ಬೇಲಿಯಾಗಲಿ ಅಳವಡಿಸುವ ಕೆಲಸ ಮಾಡಿಲ್ಲ. ಇನ್ನು ಬೀಡಾಡಿ ದನಗಳ ಹಾವಳಿಗೂ ಕಡಿವಾಣ ಹಾಕಿಲ್ಲ. ಹೀಗಾಗಿ ಗುಂಡಿಗಳು ಬಲಿ ತೆಗೆದುಕೊಳ್ಳುತ್ತಿವೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಬಿದ್ದರೆ ಗತಿ ಏನು? ಇದೆಲ್ಲಾ ಪುರಸಭೆ ಅಧಿಕಾರಿಗಳಿಗೆ ಕಾಣುವುದಿಲ್ಲವೇ? ಇವರಿಗೆ ಹೇಳುವವರು, ಕೇಳುವವರಿಲ್ಲವೇ? ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts