More

    ಸಾವೇಹಕ್ಲು ಕಾಲುವೆ ಕಾಮಗಾರಿ ಅವೈಜ್ಞಾನಿಕ

    ನಗರ: ಸಾವೇಹಕ್ಲು ಜಲಾಶಯದಿಂದ ಲಿಂಗನಮಕ್ಕಿಗೆ ನೀರು ಹರಿಸುವ ಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕೂಡಲೆ ಸರಿಪಡಿಸಿಕೊಳ್ಳದಿದ್ದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕಿಮ್ಮನೆ ರತ್ನಾಕರ್ ಎಚ್ಚರಿಕೆ ನೀಡಿದರು.

    ಕರಿಮನೆ ಗ್ರಾಪಂ ವ್ಯಾಪ್ತಿಯ ಸಾವೇಹಕ್ಲು ಡ್ಯಾಂನಿಂದ ಲಿಂಗನಮಕ್ಕಿಗೆ ನೀರು ಹರಿಸುವ ಕಾಲುವೆ ದುರಸ್ತಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್ ನಿಗಮದವರು ಪ್ರತಿವರ್ಷ ಕಾಲುವೆ ದುರಸ್ತಿ ಮಾಡುತ್ತಲೇ ಇದ್ದಾರೆ. ಇದೀಗ 5ನೇ ಬಾರಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಕಾಮಗಾರಿ ಬೇಕಾಬಿಟ್ಟಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಕಾಲುವೆ ಪಕ್ಕದಲ್ಲೇ ಮಳಲಿ ಗ್ರಾಮದ ಸಂಪರ್ಕ ರಸ್ತೆಯಿದ್ದು ಸಂಪೂರ್ಣ ಹಾಳಾಗಿದೆ. ಸೇತುವೆ ಕೂಡ ಶಿಥಿಲಗೊಂಡಿದೆ. ಇದರಿಂದ 150 ಕುಟುಂಬಗಳಿಗೆ ಸಂಕಷ್ಟ ಎದುರಾಗಿದ್ದು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.

    ನೀರು ಹರಿಸಲು ಬಿಡುವುದಿಲ್ಲ: ಕೆಪಿಸಿ ಧೋರಣೆ ಖಂಡಿಸಿದ ಕರಿಮನೆ ಗ್ರಾಪಂ ಅಧ್ಯಕ್ಷ ಹಲಸಿನಳ್ಳಿ ರಮೇಶ್ ಮತ್ತು ಸದಸ್ಯ ಸತೀಶ್ ಪಟೇಲ್, ಮಳಲಿ ಗ್ರಾಮದ ಜನ ರಸ್ತೆ ಮತ್ತು ಸೇತುವೆ ವಿಚಾರದಲ್ಲಿ ಕೆಪಿಸಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರತಿವರ್ಷ ಕಾಲುವೆ ದುರಸ್ತಿಗೆ ಮಾತ್ರ ಹಣವಿಟ್ಟು ಕಾಮಗಾರಿ ನಾಟಕವಾಡುತ್ತಿದೆ. ಇನ್ನಾದರೂ ಕೆಪಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಸಾವೇಹಕ್ಲು ಜಲಾಶಯದಿಂದ ಲಿಂಗನಮಕ್ಕಿಗೆ ನೀರುಹರಿಸಲು ಬಿಡುವುದಿಲ್ಲ ಎಂದ ಹೇಳಿದರು.

    ಮೂಡುಗೊಪ್ಪ ಗ್ರಾಪಂ ಉಪಾಧ್ಯಕ್ಷ ಕರುಣಾಕರಶೆಟ್ಟಿ, ವಿಎಸ್​ಎಸ್​ಎನ್ ನಿರ್ದೇಶಕರಾದ ಸಾದಗಲ್ ಅಂಬರೀಷ್, ಎಂ.ವಿಶ್ವನಾಥ, ಜನಸೇವಕ ಟ್ರಸ್ಟ್ ಸಂಸ್ಥಾಪಕ ವಿಕ್ರಮ ರೇವಣಕರ್, ಶ್ರೀಕಾಂತ್ ಕಾನ್​ವುನೆ, ಸುಧಾಕರ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts