More

    ಸಾಲ ಸೌಲಭ್ಯದಿಂದ ಆರ್ಥಿಕ ಪ್ರಗತಿ ಸಾಧ್ಯ

    ಅಥಣಿ ಗ್ರಾಮೀಣ, ಬೆಳಗಾವಿ: ಪಿಕೆಪಿಎಸ್‌ದಿಂದ ಪಡೆದ ಸಾಲವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿ, ನಿಗದಿತ ಸಮಯಕ್ಕೆ ಮರುಪಾವತಿ ಮಾಡಿ ಆರ್ಥಿಕ ಸಬಲರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ಜಕ್ಕಾರಟ್ಟಿ ಗ್ರಾಮದಲ್ಲಿ ಶ್ರೀ ವಿಠ್ಠಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಸಾಲ ವಿತರಣೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಪತ್ತು ವಿತರಿಸಿ ಅವರು ಮಾತನಾಡಿದರು. ವಿಠ್ಠಲ ಪಿಕೆಪಿಎಸ್ ಸಂಘದ 135 ಸದಸ್ಯರಿಗೆ 55.40 ಲಕ್ಷ ಸಾಲ ನೀಡಲಾಗಿದ್ದು, ಈ ಬಡ್ಡಿ ರಹಿತ ಸಾಲ ಗ್ರಾಮೀಣ ಪ್ರದೇಶದ ಬಡ ರೈತರಿಗೆ ವರದಾನವಾಗಿದೆ. ಅಥಣಿ ತಾಲೂಕಿನಲ್ಲಿರುವ 144 ಪಿಕೆಪಿಎಸ್‌ದಿಂದ ಈಗಾಗಲೇ 472 ಕೋಟಿ ರೂ. ಬಡ್ಡಿರಹಿತ ಸಾಲ ನೀಡಲಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗುವುದು ಎಂಬ ಭರವಸೆ ನೀಡಿದರು.

    ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಮಾತನಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಶ್ರಮ ಹಾಗೂ ಪ್ರೋತ್ಸಾಹದ ಫಲವಾಗಿ ಇಂದು ಡಿಸಿಸಿ ಬ್ಯಾಂಕ್‌ನಿಂದ ರೈತರ ಕುಟುಂಬಗಳಿಗೆ ನೀಡುತ್ತಿರುವ ಆರ್ಥಿಕ ನೆರವು ದೇಶದಲ್ಲಿಯೇ ಮಾದರಿಯಾಗಿದೆ ಎಂದರು. ಸಂಬರಗಿ ಪಿಕೆಪಿಎಸ್ ಅಧ್ಯಕ್ಷ ಅಬ್ದುಲ್ ಮುಲ್ಲಾ ಮಾತನಾಡಿದರು, ವಿಠ್ಠಲ ಪಿಕೆಪಿಎಸ್ ಸಂಘದ ಪ್ರಕಾಶ ಖುಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮಹಾನಂದ ನಿವಲಗಿ, ಶಾಂತಿನಾಥ ನಂದೇಶ್ವರ, ಅಥಣಿ ಡಿಸಿಸಿ ಬ್ಯಾಂಕ್ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ರವೀಂದ್ರ ನಾಯಕವಾಡಿ, ಚೇತನ ದಳವಾಯಿ, ರೇವಣ್ಣ ಪಾಟೀಲ, ಮಹೇಶ ಮಾಳಿ, ರಘುನಾಥ ಹಜಾರೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts