More

    ಸಾಲದ ಅರ್ಜಿ ವಿಲೇವಾರಿ ಮಾಡಿ

    ಚಿಕ್ಕಮಗಳೂರು: ವ್ಯಾಪಾರ, ಸಣ್ಣ ಕೈಗಾರಿಕೋದ್ಯಮ ಸೇರಿದಂತೆ ವಿವಿಧ ಸ್ವ ಉದ್ಯೋಗ ಸಾಲ ಪಡೆಯಲು ಸಲ್ಲಿಸಿದ್ದ 127 ಅರ್ಜಿಗಳನ್ನೂ ಪರಿಶೀಲಿಸಿ, ಶಿಫಾರಸು ಮಾಡಿ ಬ್ಯಾಂಕ್​ಗಳಿಗೆ ಕಳಿಸಲು ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

    ನಗರಸಭೆಯಲ್ಲಿ ಗುರುವಾರ ಡೇ ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಮಂಜೂರಾತಿಗೆ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್​ಫೋರ್ಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇನ್ನೊಂದು ವಾರದಲ್ಲಿ ಅರ್ಜಿ ವಿಲೇವಾರಿ ಮಾಡಿ ವರದಿ ನೀಡಲು ಬ್ಯಾಂಕ್​ಗಳು ಕ್ರಮ ಕೈಗೊಳ್ಳಬೇಕು ಎಂದು ತೀರ್ವನಿಸಲಾಯಿತು.

    ವ್ಯಾಪಾರ, ಸಣ್ಣ ಕೈಗಾರಿಕೋದ್ಯಮ, ಸಾಲ ವಿತರಣೆ ಮತ್ತು ಮರುಪಾವತಿಯನ್ನು ಯಾವ ರೀತಿ ಮಾಡಬೇಕೆಂಬ ಬಗ್ಗೆ ರ್ಚಚಿಸಲಾಗಿದೆ. ಫಲಾನುಭವಿಗಳು ಒಂದೆ ಸಾರಿಗೆ ದೊಡ್ಡ ಉದ್ಯಮಕ್ಕೆ ಮುಂದಾಗುವ ಬದಲು ಸಣ್ಣದಾಗಿ ವ್ಯಾಪಾರ ಆರಂಭಿಸಿ ಹಂತ ಹಂತವಾಗಿ ಮೇಲೇರುವ ಕೆಲಸ ಮಾಡಬೇಕು. ಒಂದು ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಅರ್ಜಿ ಹಾಕಿದ್ದೀರಿ. ಯಾವ ಉದ್ಯೋಗ ನಡೆಸುತ್ತೇವೆ? ಅದಕ್ಕೆ ಎಷ್ಟು ಹಣ ಬೇಕು? ನಾವು ನಡೆಸುವ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಾ? ಎಂಬ ಬಗ್ಗೆ ಮೊದಲೇ ವಿಮರ್ಶೆ ಮಾಡಿ ಉದ್ಯೋಗ ಆರಂಭಿಸಬೇಕು. ಸಾಲ ಸಿಗುತ್ತದೆಂದು ಲಕ್ಷಾಂತರ ರೂ. ಸಾಲ ಪಡೆದು ಇತ್ತ ಬಡ್ಡಿ ಕಟ್ಟಲೂ ಆಗದೆ, ಸಾಲದ ಕಂತನ್ನೂ ಪಾವತಿಸಲಾಗದ ಸ್ಥಿತಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಗತ್ಯಕ್ಕೆ ಅನುಗುಣವಾಗಿ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಲಹೆ ನೀಡಿದರು.

    ಈಗಾಗಲೆ ಬೀದಿಬದಿ ವ್ಯಾಪಾರಿಗಳು 10ರಿಂದ 20 ಸಾವಿರ ರೂ. ಸಾಲಕ್ಕೆ 227 ಅರ್ಜಿ ಸಲ್ಲಿಸಿದ್ದಾರೆ. ಆದರೆ ಬ್ಯಾಂಕ್​ನಿಂದ ಮಂಜೂರಾತಿ ನೀಡಿಲ್ಲ. ಸಣ್ಣ ವ್ಯಾಪಾರಸ್ಥರಿಗೆ, ಬಡವರಿಗೆ ಸಾಲ ನೀಡುವಾಗ ಅಲೆದಾಡಿಸದಂತೆ ಶೀಘ್ರ ಸಾಲ ನೀಡಬೇಕೆಂದು ಪ್ರಧಾನ ಮಂತ್ರಿಯವರೇ ನಿರ್ದೇಶನ ನೀಡಿದ್ದಾರೆ. ಹಾಗಾಗಿ ಒಂದು ವಾರದಲ್ಲಿ ಸಾಲ ಮಂಜೂರಾಗಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಯಾವ ಬ್ಯಾಂಕ್​ನಲ್ಲಿ ಅರ್ಜಿ ವಿಲೇವಾರಿಯಾಗಿಲ್ಲವೋ ಅಂತಹ ಬ್ಯಾಂಕ್ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts