More

    ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಿ

    ಹುಕ್ಕೇರಿ: ಹುಕ್ಕೇರಿ ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರು ಕಲುಷಿತವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಜೀವಜಲವನ್ನು ಶುದ್ಧೀಕರಿಸಿ ಮನೆಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಪುರಸಭೆ ಪದಾಧಿಕಾರಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಸೂಚಿಸಿದ್ದಾರೆ.

    ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ಹುಕ್ಕೇರಿ ಪುರಸಭೆ ನಾಮನಿರ್ದೇಶಿತ ಸದಸ್ಯರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಜನಪರ ಆಡಳಿತಕ್ಕೆ ಸಹಕಾರಿಯಾಗಲು ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಪಟ್ಟಣದಲ್ಲಿ ಪುರಸಭೆ ಆಸ್ತಿಗಳ ಅತಿಕ್ರಮಣ ಹೆಚ್ಚಿದ್ದು, ಅವುಗಳನ್ನು ಗುರುತಿಸಿ ಸರ್ವೇ ಮಾಡಿಸಲು ಸೂಚಿಸಿದರು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಚಿವ ಉಮೇಶ ಕತ್ತಿ ಸಾಕಷ್ಟು ಅನುದಾನ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಧಿಕಾರಕ್ಕಿಂತ ಜನಸೇವೆ ಮತ್ತು ಜನೋಪಯೋಗಿ ಕಾರ್ಯಗಳು ಶಾಶ್ವತ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.

    ನಂತರ ನಾಮನಿರ್ದೇಶಿತ ಸದಸ್ಯರು ಆಹಾರ, ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ನಾಮನಿರ್ದೇಶಿತ ಸದಸ್ಯರಾದ ರಾಜು ಕುರಂದವಾಡೆ, ಮಧುಕರ ಕರನಿಂಗ, ಗಿರೀಶ ಕುಲಕರ್ಣಿ, ಕುಮಾರ ಜುಠಾಳೆ, ಸವಿತಾ ಏಣಗಿಮಠ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts