More

    ಸಾರ್ವಜನಿಕರನ್ನು ಕಾಯಿಸಬೇಡಿ

    ಕುಮಟಾ: ಇಲ್ಲಿನ ತಹಸೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಶಾಸಕ ದಿನಕರ ಶೆಟ್ಟಿ ಬುಧವಾರ ಖುದ್ದು ಪರಿಶೀಲಿಸಿದರು.

    ಈ ವೇಳೆ ಕಚೇರಿಯ ವಿವಿಧ ಕೊಠಡಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ದಿನಚರಿ, ಕೆಲಸದ ಮಾಹಿತಿ ಪಡೆದರು. ಕಡಿಮೆ ಕೆಲಸ ಇರುವಲ್ಲಿಂದ ಕೆಲಸದ ಒತ್ತಡವಿರುವ ಕಡೆಗೆ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಿ ಎಂದು ವಿಭಾಗ ಮುಖ್ಯಸ್ಥರಿಗೆ ಸೂಚಿಸಿದರು.

    ಆಧಾರ ಸೇವಾ ಕೇಂದ್ರದೆದುರು ಹೆಚ್ಚಿನ ಸಂಖ್ಯೆಯಲ್ಲಿ ಜನ ಕಾಯುತ್ತಿರುವುದನ್ನು ಕಂಡು ಇಲ್ಲಿ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿದಾಗ ಪ್ರಿಂಟರ್ ಸರಿಯಿಲ್ಲದಿರುವುದು ಬೆಳಕಿಗೆ ಬಂತು. ಕೂಡಲೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಸಕರು ತಾಕೀತು ಮಾಡಿದರು.

    ಕಚೇರಿ ಆವಾರದಲ್ಲಿ ವಿವಿಧ ಕೆಲಸಗಳಿಗಾಗಿ ಗ್ರಾಮೀಣ ಭಾಗದಿಂದ ಬಂದು ಕಾಗದ ಪತ್ರ ಹಿಡಿದು ಹೊರಗೆ ನಿಂತಿದ್ದ ಜನರಿಗೆ ನೆರಳಿನಲ್ಲಿ ಕೂರಲು ಬೇಂಚ್ ಹಾಗೂ ಕುರ್ಚಿ ವ್ಯವಸ್ಥೆ ಮಾಡಿಸಿದರು.

    ಇಲ್ಲಿ ಯಾರಿಗೂ ಮೈಗಳ್ಳತನಕ್ಕೆ ಅವಕಾಶವಿಲ್ಲ. ಸಿಬ್ಬಂದಿ ಚುರುಕಾಗಿದ್ದರೆ ಜನರ ಕೆಲಸ ಬೇಗ ಬೇಗ ಮುಗಿಯುತ್ತದೆ. ಸಾರ್ವಜನಿಕರ ಸಾಮಾನ್ಯ ಕೆಲಸಗಳಿಗೂ ಅನವಶ್ಯಕವಾಗಿ ವಿಳಂಬ ಮಾಡಿದರೆ, ಸತಾಯಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖ್ಯವಾಗಿ ಕಚೇರಿಯ ಕಾರ್ಯಾವಧಿಯಲ್ಲಿ ಅನಗತ್ಯವಾಗಿ ಸಿಬ್ಬಂದಿ ಅನಗತ್ಯವಾಗಿ ಹೊರಗಡೆ ತಿರುಗಾಡುವುದು, ಮೊಬೈಲ್​ನಲ್ಲಿ ಕಾಲಹರಣ ಮಾಡಬಾರದು. ಇಂಥ ವರ್ತನೆ ಕಂಡುಬಂದಲ್ಲಿ ಕಚೇರಿಯೊಳಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕಾಗುತ್ತದೆ ಎಂದರು.

    ಬಳಿಕ ತಹಸೀಲ್ದಾರ್ ಮೇಘರಾಜ ನಾಯ್ಕ ಅವರೊಂದಿಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಜಿಪಂ ಸದಸ್ಯ ಗಜಾನನ ಪೈ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts