More

    ಸಾರಿಗೆ ಸಂಸ್ಥೆ ಸಿಬ್ಬಂದಿಗೆ ರೋಗ ನಿರೋಧಕ ಔಷಧ ವಿತರಣೆ

    ಕಲಬುರಗಿ: ಕರೊನಾ ವೈರಸ್ ವಿರುದ್ದ ರೊಗ ನಿರೋಧಕ ಶಕ್ತಿ ವೃದ್ದಿಸಲು ಜಿಪಂ ಮತ್ತು ಜಿಲ್ಲಾ ಆಯುಷ್ ಇಲಾಖೆಯಿಂದ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 450 ಜನರಿಗೆ ಯುನಾನಿ, ಆಯುರ್ವೇದ ಹಾಗೂ ಹೋಮಿಯೋಪಥಿ ರೋಗ ನಿರೋಧಕ ಔಷಧಿಗಳನ್ನು ಘಟಕ-1 ಸಿಬ್ಬಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಯಿತು.
    ಕೋವಿಡ್-19 ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯುನಾನಿ ಔಷಧಿಯಾದ ಆರ್​ ಕೆ ಅಜೀಬ್, ಆಯುರ್ವೇದ ಔಷಧ ಷಂಶಮನಿ ವಾಟಿ ಮತ್ತು ಹೋಮಿಯೋಪತಿ ಔಷಧಿ ಆರ್ಸೆನಿಕ ಆಲ್ಬಮ್ ಔಷಧಿಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ಅಯುಷ್ ಅಧಿಕಾರಿ ಡಾ. ಗಿರಿಜಾ ಎಸ್. ಯು. ವಿತರಿಸಿ ಮಾತನಾಡಿ, ಕೋವಿಡ್-19 ರೋಗದ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಚಿಕಿತ್ಸಾ ಪದ್ಧತಿ ಉತ್ತಮವಾಗಿದೆ ಎಂದರು.
    ವಿಭಾಗೀಯ ಕಾರ್ಮಿಕ ಅಧಿಕಾರಿ ಶಂಕ್ರಪ್ಪ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕ-1ರ ವ್ಯವಸ್ಥಾಪಕ ಮಂಜುನಾಥ, ವಿಭಾಗೀಯ ನೋಡಲ್ ಅಧಿಕಾರಿ ಡಾ. ಪ್ರದೀಪ ಪಾಟೀಲ ಹಾಗೂ ವೈದ್ಯಾಧಿಕಾರಿ ಡಾ. ಸುಧೀರ್ ಕುಳಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts