More

    ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಎಂಟಿಬಿ ನಾಗರಾಜ್ ಹೇಳಿಕೆ ಸೂಲಿಬೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
    ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು, ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ
    ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
    ಹೋಬಳಿ ಬಾಗಲೂರು ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬಿಜೆಪಿ ಶಿಸ್ತಿನ ಪಕ್ಷ, ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ, ಯಾವುದೆ ಒಳಜಗಳಗಳಿಗೆ ಅವಕಾಶವಿಲ್ಲ,ಪ್ರತಿಪಕ್ಷಗಳು ಚುನಾವಣೆ ಸಮೀಪಿಸುತ್ತಿರುವುದರಿಂದ ಆಡಳಿತ ಪಕ್ಷದ ಕಾಲೆಳೆಯಲು ವಾಮಮಾರ್ಗ ಅನುಸರಿಸುತ್ತಿವೆ ಎಂದು ಅರೋಪಿಸಿದರು. ಯಾವ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಏನೇನು ಕಾರ್ಯಕ್ರಮ ರೂಪಿಸಿವೆ, ಜನರಿಗೆ ಯಾವ ಅನುಕೂಲ ಮಾಡಿಕೊಟ್ಟಿವೆ ಎಂದು ತಿಳಿಸಲಿ ಅದರಲ್ಲಿ ತಪ್ಪಿಲ್ಲ. ಅದು ಬಿಟ್ಟು ವೃಥಾ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು, ಯಾರೇ ಏನೇ ಹೇಳಿದರು ಮತದಾರರು ತುಲನೆ ಮಾಡಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
    ಹೊಸಕೋಟೆಯಲ್ಲಿ ಬಿಜೆಪಿ ಅನುದಾನದಲ್ಲಿ ನಡೆದಿರುವ ಕಾಮಗಾರಿಗಳು, ಯೋಜನೆಗಳ ಬಗ್ಗೆ ಜನರಿಗೂ ಅರಿವಿದೆ. ಕಡೆಗೆ ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರೇ ಜನಸೇವೆ ಮಾಡುತ್ತಾರೆ ಎಂದರು. ಹೊಸಕೋಟೆಯನ್ನು ಮಾದರಿ ತಾಲೂಕು ಮಾಡುವ ಉದ್ದೇಶದಿಂದ ನಿರಂತರ ಶ್ರಮಿಸುತ್ತಿದ್ದೇನೆ. ಉಪಚುನಾವಣೆಯಲ್ಲಿ ಸೋಲು ಕಂಡರೂ ಕ್ಷೇತ್ರವನ್ನು ಕಡೆಗಣಿಸಲಿಲ್ಲ, ಬದಲಿಗೆ ಪಟ್ಟು ಹಿಡಿದು ಸರ್ಕಾರದಿಂದ ಕೋಟ್ಯಂತರ ರೂ.ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
    ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ, ವಿಧಾನ ಪರಿಸತ್ ಸದಸ್ಯರ ವಿಶೇಷ ಅನುದಾನದಲ್ಲಿ ಅರಸನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ, ಬಾಗಲೂರು ಗ್ರಾಮದಲ್ಲಿ 15 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ, ಸೊಣ್ಣೆಬೈಚನಹಳ್ಳಿಯಲ್ಲಿ 5ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಹೇಳಿದರು.


    ಶೀಘ್ರ ಅಭಿವೃದ್ಧಿ: ಹೊಸಕೋಟೆಯಿಂದ ಸೂಲಿಬೆಲೆ ರಾಷ್ಟ್ರೀಯ ಹೆದ್ದಾರಿ 207 ತುಂಬಾ ಹಳ್ಳಕೊಳ್ಳಗಳು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇದನ್ನು ರಾಷ್ಟ್ರೀಯ ಹೆದ್ದಾರಿ ನಿಗಮದಿಂದ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ವಹಿಸುವಂತೆ ಮುಖ್ಯ ಇಂಜನಿಯರ್ ಬಳಿ ಮಾತನಾಡಿದ್ದೇನೆ, ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
    ಓಟಿಗಾಗಿ ಗಿಮಿಕ್: ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಅನೇಕ ಮಹತ್ತರ ಯೋಜನೆ ಕೊಟ್ಟಿದ್ದಾರೆ, 8 ವರ್ಷದಿಂದ ಜನಾನುರಾಗಿ ಅಡಳಿತ ನೀಡಿಕೊಂಡೇ ಬಂದಿದ್ದಾರೆ, ಆದರೂ ಪ್ರತಿಪಕ್ಷಗಳು ಅವರನ್ನು ವಿರೋಧ ಮಾಡುತ್ತಲೆ ಇರುತ್ತವೆ. ಇದೆಲ್ಲ ಸಹಜ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿಪಕ್ಷಗಳು ಓಟಿಗಾಗಿ ಗಿಮಿಕ್ ಮಾಡುತ್ತವೆ ಅಷ್ಟೆ ಎಂದು ಸಚಿವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts