More

    ಸಾಮಾನ್ಯ ಸಭೆ ಕರೆದವರೇ ಗೈರು

    ರೋಣ: ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಇನ್ನು ಪುರಸಭೆಯ ಸಾಮಾನ್ಯ ಸಭೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಕಚೇರಿಗೆ ಬಾರದೇ ಕುಂಟುನೆಪ ಹೇಳಿ ಸೇವೆಗೆ ಗೈರಾಗುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಪಕ್ಷ ಬೇಧ ಮರೆತು ಮುಖ್ಯಾಧಿಕಾರಿ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.

    ಪುರಸಭೆ ಸಾಮಾನ್ಯ ಸಭೆಯನ್ನು ಶುಕ್ರವಾರ ನಿಗದಿಪಡಿಸಿ ಮುಖ್ಯಾಧಿಕಾರಿ ನೂರುಲ್ಲಾಖಾನ್ ಅವರು ಎಲ್ಲ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಎಲ್ಲ ಸದಸ್ಯರು ಸಭೆಗೆ ಆಗಮಿಸಿದ್ದರು. ಆದರೆ, ಮುಖ್ಯಾಧಿಕಾರಿಯೇ ಸಭೆಗೆ ಬರಲಿಲ್ಲ. ಕೆಲ ಹೊತ್ತಿನ ಬಳಿಕ ವ್ಯವಸ್ಥಾಪಕ ಸಿ.ವಿ. ಕುಲಕರ್ಣಿ ಅವರು ಮುಖ್ಯಾಧಿಕಾರಿ ರಜೆ ಮೇಲೆ ಹೋಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

    ಇದರಿಂದ ಆಕ್ರೋಶಗೊಂಡ ಪುರಸಭೆ ಅಧ್ಯಕ್ಷೆ ವಿದ್ಯಾ ದೊಡ್ಡಮನಿ, ‘ಮುಖ್ಯಾಧಿಕಾರಿ ಸಾಮಾನ್ಯ ಸಭೆಗೆ ಕಿಮ್ಮತ್ತು ಕೊಡುತ್ತಿಲ್ಲ. ಮೀಟಿಂಗ್ ನೆಪವೊಡ್ಡಿ ಪ್ರತಿದಿನ ಸೇವೆಗೆ ಗೈರಾಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ತಿಳಿ ಹೇಳಿದರೂ ಅವರು ತಿದ್ದಿಕೊಳ್ಳುತ್ತಿಲ್ಲ’ ಎಂದರು.

    ಆಗ ಮಧ್ಯ ಪ್ರವೇಶಿಸಿದ ಪುರಸಭೆ ವಿರೋಧ ಪಕ್ಷದ ನಾಯಕ ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ, ‘ಪುರಸಭೆ ಜನಪ್ರತಿನಿಧಿಗಳನ್ನು ನೂರುಲ್ಲಾಖಾನ್ ದೂರವಿಟ್ಟು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಾವು ಹೇಳಿದ ಯಾವುದೇ ಕೆಲಸ-ಕಾರ್ಯಗಳಾಗುತ್ತಿಲ್ಲ. ನಮ್ಮ ವಾರ್ಡ್​ಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಆಗದ ಪರಿಸ್ಥಿತಿ ನಮ್ಮದಾಗಿದೆ. ದಯವಿಟ್ಟು ಮುಖ್ಯಾಧಿಕಾರಿಯನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.

    ಪುರಸಭೆ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ‘ಎಲ್ಲ ಪುರಸಭೆ ಸದಸ್ಯರು ಈಗಲೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಈ ಕುರಿತು ದೂರು ನೀಡೋಣ’ ಎಂದರು. ಮಾತಿಗೆ ಸಹಮತ ವ್ಯಕ್ತಪಡಿಸಿ ಸದಸ್ಯರೆಲ್ಲರೂ ಗದಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

    ಸದಸ್ಯರಾದ ದಾವಲ್​ಸಾಬ್ ಬಾಡಿನ, ಹನಮಂತ ತಳ್ಳಿಕೇರಿ, ವಿಜಯ ಗಡಗಿ, ಅಲ್ತಾಫ್ ಅಹ್ಮದ ತಹಶೀಲ್ದಾರ್, ಸಂತೋಷ ಕಡಿವಾಲ, ಅಂದಪ್ಪ ಗಡಗಿ, ದುರ್ಗಪ್ಪ ಹಿರೇಮನಿ, ಬಾವಾಸಾಬ್ ಬೆಟಗೇರಿ, ಈಶ್ವರಪ್ಪ ಕಡಬಿನಕಟ್ಟಿ, ಶಕುಂತಲಾ ದೇಶಣ್ಣವರ, ಲಕ್ಷ್ಮೀ ಕೊಪ್ಪದ, ವಿಜಯಲಕ್ಷ್ಮಿ ಕೊಟಗಿ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts