More

    ಸಾಗರ: ಬ್ರಾಹ್ಮಣ ಬೇದೂರಿನಲ್ಲಿ ಹಸಿರು ಬೆಟ್ಟ ಕುಸಿಯುವ ಆತಂಕ

    ಸಾಗರ: ತಾಲೂಕಿನ ಬ್ರಾಹ್ಮಣ ಬೇದೂರು ಗ್ರಾಮದಲ್ಲಿ ಹಸಿರು ಬೆಟ್ಟ ಕುಸಿಯುವ ಆತಂಕ ಎದುರಾಗಿದೆ. ಬೆಟ್ಟದ ಮೇಲಿನ ಗಣಿಗಾರಿಕೆ ನಿಂತರೂ ಬಾಯ್ದೆರೆದು ನಿಂತ ಗಣಿ ಬಾವಿಗಳು ಬೃಹತ್ ಕೆರೆಯಾಗಿ ಮಾರ್ಪಟ್ಟಿದೆ. ನೀರಿನ ಒತ್ತಡ ಹೆಚ್ಚಾಗಿ ಗುಡ್ಡ ಕುಸಿತ ಆರಂಭವಾಗಿದೆ. ಮನೆ, ಕೊಟ್ಟಿಗೆ ಮೇಲೆ ಬೆಟ್ಟ ಜಾರುವ ಆತಂಕದಲ್ಲಿ ಜನತೆ ಇದ್ದಾರೆ ಎಂದು ವೃಕ್ಷಲಕ್ಷ ಸಮೀಕ್ಷಾ ತಂಡ ತಿಳಿಸಿದೆ. ತಕ್ಷಣ ಸ್ಥಳೀಯ ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಂದಾಗುವ ಅಪಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದೆ. ಈಚೆಗೆ ವೃಕ್ಷಲಕ್ಷ ತಂಡ ಬೇದೂರಿಗೆ ಭೇಟಿ ನೀಡಿ ಗಣಿಗಾರಿಕೆ ಹಾಗೂ ಭೂ ಕುಸಿತದ ಪರಿಸ್ಥಿತಿ ವೀಕ್ಷಿಸಿತು. ಇಲ್ಲಿ ಅಕ್ರಮ ಗಣಿಗಾರಿಕೆ ಜನಾಂದೋಲನದ ಪರಿಣಾಮವಾಗಿ ನಿಂತಿದೆ. ಆದರೆ ಗಣಿಗಾರಿಕೆ ದುಷ್ಪರಿಣಾಮವಾಗಿ ಪುನಃ ಭೂಕುಸಿತದ ಆತಂಕದಲ್ಲಿ ಹಳ್ಳಿಗಳು ಸಿಲುಕಿದ್ದಾರೆ. ಈಗ ಜೀವ ಹಾನಿ ಆಗದಂತೆ ಮುನ್ನೆಚ್ಚರಿಕೆ ಅವಶ್ಯ. ಭಾರಿ ಮಳೆಯಿಂದ ಕಡಿದಾದ ಈ ಬೆಟ್ಟ ಕುಸಿತ ಇನ್ನಷ್ಟು ಹೆಚ್ಚಬಹುದು ಎಂದು ವೃಕ್ಷಲಕ್ಷ ತಂಡ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದೆ.
    ಕಳೆದ ವರ್ಷ 4 ಮನೆಗಳು ಭೂ ಕುಸಿತದಿಂದ ನಾಶವಾಗಿವೆ. ಬೆಟ್ಟದ ಮೇಲಿನ 4 ವರ್ಷಗಳ ಅವ್ಯಾಹತ ಗಣಿಗಾರಿಕೆ ಹೋರಾಟದಿಂದ ತಡೆಬಿದ್ದಿದೆ. ಇದೀಗ ಗುಡ್ಡದ ಬುಡದ ನಮ್ಮ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂದು ಗ್ರಾಮ ಮುಖಂಡ ಉದಯ ಕುಮಾರ ಸಂಕಟ ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts