More

    ಸಾಗರದ ಮಹಾಗಣಪತಿ ರಥೋತ್ಸವ ಸಂಪನ್ನ; ಮುಗಿಲು ಮುಟ್ಟಿದ ಭಕ್ತರ ಜಯಘೋಷ

    ಸಾಗರ: ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
    ದೇವಸ್ಥಾನದ ಅರ್ಚಕ ವೃಂದ, ತಾಂತ್ರಿಕ ವರ್ಗದ ಸಮಕ್ಷಮ ವಿವಿಧ ಧಾರ್ಮಿಕ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಸ್ವರ್ಣ ಗಣಪತಿ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ರಥದಲ್ಲಿ ಗಣಪತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 8.15ರ ಶುಭ ಮುಹೂರ್ತದಲ್ಲಿ ಭಕ್ತರು ರಥವನ್ನು ಎಳೆಯುವ ಶಾಸ್ತ್ರ ನೆರವೇರಿಸಿದರು. ದೇವಸ್ಥಾನದ ಅರ್ಚಕರಾದ ಲಕ್ಷ್ಮಣ್ ಜೋಯ್ಸ ಸಾರಥ್ಯದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು.
    ಸಮರ್ಥ್ ಭಟ್, ಸದಾಶಿವ ಜೋಯ್ಸ, ಜಗದೀಶ್ ಭಟ್, ನವೀನ್ ಜೋಯ್ಸ, ರಾಘವೇಂದ್ರ ಭಟ್, ಸುಧೀಂದ್ರ ಭಟ್, ರಮೇಶ್ ಭಟ್, ಗಜಾನನ ಭಟ್ ಇತರರು ಪಾಲ್ಗೊಂಡಿದ್ದರು.  ಪ್ರಖರ ಬಿಸಿಲಿನ ಮಧ್ಯೆಯೂ ಜಾತ್ರೆಗೆ ಭಕ್ತ ಸಾಗರವೇ ನೆರೆದಿತ್ತು. ರಥೋತ್ಸವವಾಗುತ್ತಿದ್ದಂತೆಯೇ ಹಣ್ಣುಕಾಯಿ ಮಾಡಿಸಲು ನೂಕುನುಗ್ಗಲು ಉಂಟಾಯಿತು. ರಥೋತ್ಸವಕ್ಕೆ ಬಂದ ಭಕ್ತರಿಗೆ ನೈವೇದ್ಯ ಮಾಡಿದ ಪಂಚಕಜ್ಜಾಯ ವಿತರಿಸಲಾಯಿತು. ಮಹಾಗಣಪತಿಗೆ ಭಕ್ತರು ಜಯಘೋಷ ಹಾಕಿದರು. ಜಾತ್ರೆಯಲ್ಲಿ ಮೈಲಾರ ದೇವರ ಗೊಗ್ಗಯ್ಯ, ಯಲ್ಲಮ್ಮ ಜೋಗುತಿಯರು ಭಕ್ತರಿಗೆ ಕುಂಕುಮ ಹಚ್ಚಿ ಭಕ್ತಿಯ ಮಹತ್ವವನ್ನು ಪರಿಚಯಿಸುತ್ತಿದ್ದುದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts