More

    ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

    ಭಾಲ್ಕಿ: ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಚನ್ನಬಸವಾಶ್ರಮದಲ್ಲಿ ಶನಿವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಬಸವಣ್ಣನವರ ಜಯಂತಿಯನ್ನು ಮೂರು ದಿನ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

    ಚನ್ನಬಸವಾಶ್ರಮ ಪರಿಸರದಲ್ಲಿ ಮೇ ೮, ೯ರಂದು ಸಂಜೆ ೬ರಿಂದ ೭.೩೦ರವರೆಗೆ ಬಸವಣ್ಣನವರ ಚರಿತ್ರೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ೧೦ರಂದು ಸಂಜೆ ೫ಕ್ಕೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ತೊಟ್ಟಿಲು, ವೇದಿಕೆ ಕಾರ್ಯಕ್ರಮ ನಡೆಸಲು ಬಸವ ಭಕ್ತರು ಸಮ್ಮತಿ ಸೂಚಿಸಿದರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳು ಜಗತ್ತಿಗೆ ಮಾದರಿಯಾಗಿವೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದ ಜನರು ಒಳಗೊಂಡು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
    ಪ್ರಮುಖರಾದ ವಿಶ್ವನಾಥಪ್ಪ ಬಿರಾದಾರ, ಶಂಭುಲಿಂಗ ಕಾಮಣ್ಣ, ಉಮಾಕಾಂತ ವಾರದ, ಶ್ರೀಕಾಂತ ಭೋರಾಳೆ, ಬಸವರಾಜ ಮರೆ, ಶರಣಪ್ಪ ಬಿರಾದಾರ, ಗಣಪತಿ ಬಾವುಗೆ, ಸುಭಾಷ ಕಾರಾಮುಂಗೆ, ಪ್ರಭು ಡಿಗ್ಗೆ, ಗುಂಡಪ್ಪ ಸಂಗಮಕರ್, ಸಂತೋಷ ಬಿಜಿ ಪಾಟೀಲ್, ಸಂತೋಷ ಹಡಪದ, ರೇಖಾಬಾಯಿ ಅಷ್ಟೂರೆ, ಮಲ್ಲಮ್ಮ ಪಾಟೀಲ್ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿ ವಂದಿಸಿದರು.

    ಸಮಿತಿ ಅಧ್ಯಕ್ಷರಾಗಿ ಡಾ.ಅಷ್ಟೂರೆ ಆಯ್ಕೆ: ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಡಾ.ಅಮಿತ ಅಷ್ಟೂರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಭಯ ಪೂಜ್ಯರು ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.

    ವಿಶ್ವಗುರು ಬಸವಣ್ಣನವರು ಸಮಾಜದ ಶ್ರೇಷ್ಠ ಸುಧಾರಕರು. ಅಂತಹ ಮಹಾತ್ಮರ ಜಯಂತಿಯನ್ನು ಮೂರು ದಿವಸ ಆಚರಿಸಲು ನಿರ್ಧರಿಸಲಾಗಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
    | ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts