More

    ಸಾಂಪ್ರದಾಯಿಕ ಮೀನುಗಾರಿಕೆಗೆ ಷರತ್ತುಬದ್ಧ ಅನುಮತಿ

    ವಿಜಯವಾಣಿ ಸುದ್ದಿಜಾಲ ಕಾರವಾರ: ರಾಜ್ಯದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಸರ್ಕಾರ ಷರತ್ತುಬದ್ಧ ಅನುಮತಿಯನ್ನು ಭಾನುವಾರ ನೀಡಿದೆ. ಆದರೆ, ಗೋವಾದಲ್ಲಿ ಆಳ ಸಮುದ್ರ ಮೀನುಗಾರಿಕೆ ನಿರಂತರವಾಗಿ ಮುಂದುವರಿದಿದೆ.

    ಕಾರವಾರ ಸರ್ಕಾರಿ ಅಧಿಕಾರಿಗಳೇ ಅದನ್ನು ಖಚಿತಪಡಿಸಿದ್ದು, ಮಂಗಳೂರು ವರೆಗೂ ಗೋವಾದ ಮೀನು ಲಾರಿಗಳು ತೆರಳಲು ಅನುಮತಿ ನೀಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಈ ಎಲ್ಲ ಭಾಗದಲ್ಲಿ ಗೋವಾದ ಮೀನು ಸಾಕಷ್ಟು ವ್ಯಾಪಾರವಾಗುತ್ತಿದೆ.

    ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ್ ಸೋಮವಾರ ಗೋವಾ ಬೇತುಲ್ ಮೀನುಗಾರಿಕೆ ಜಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಶೇ. 90 ರಷ್ಟು ಮಂದಿ ಮೀನುಗಾರಿಕೆಗೆ ತೆರಳಿರುವುದು ಬಹಿರಂಗಗೊಂಡಿದೆ. ಅಲ್ಲಿ ಉತ್ತರ ಕನ್ನಡ ಜಿಲ್ಲೆಯ 300 ರಷ್ಟು ಮೀನುಗಾರರಿದ್ದು, ಸದ್ಯ 6 ಬೋಟ್​ಗಳ 20 ಸದಸ್ಯರು ಮಾತ್ರ ಇದ್ದರು. ಉಳಿದವರು ಮೀನುಗಾರಿಕೆಗೆ ತೆರಳಿದ್ದರು ಎಂದು ನಾಗರಾಜ್ ವರದಿ ನೀಡಿದ್ದಾರೆ.

    ಜಟ್ಟಿಯಲ್ಲಿದ್ದ ಜನರನ್ನು ಮಾತನಾಡಿಸ ಲಾಗಿ, ಅವರು ತಮಗೆ ಯಾವುದೇ ಜೀವನಾವಶ್ಯಕ ವಸ್ತುಗಳಿಗೆ ತೊಂದರೆ ಯಾಗಿಲ್ಲ ಎಂದು ತಿಳಿಸಿದ್ದಾರೆ ಎಂದು ಅವರು ವರದಿ ನೀಡಿದ್ದಾರೆ.

    ಡೀಸೆಲ್ ವಿತರಣೆಗೆ ಸೂಚನೆ: ಏ.15 ರಿಂದ ರಾಜ್ಯದಲ್ಲಿ 10 ಎಚ್​ವರೆಗಿನ ಇಂಜಿನ್ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ 2700 ರಷ್ಟು ಬೋಟ್​ಗಳು ಮೀನುಗಾರಿಕೆ ನಡೆಸುತ್ತಿದ್ದು. ಅವುಗಳ ನೋಂದಣಿ ಸಂಖ್ಯೆ ಹಾಗೂ ಪಾಸ್ ಪರಿಶೀಲನೆ ನಡೆಸಿ ಡೀಸೆಲ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ್ ತಿಳಿಸಿದ್ದಾರೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts