More

    ಸಾಂಪ್ರದಾಯಿಕ ಕೃಷಿಯಿಂದ ಸಮಾಜ ಸ್ವಸ್ಥ

    ತ್ಯಾಗರ್ತಿ: ಹಣದಾಸೆಗೆ ವಾಣಿಜ್ಯ ಬೆಳೆಗಳ ಮೊರೆ ಹಾಗೂ ಅಧಿಕ ಇಳುವರಿಗಾಗಿ ಆಹಾರ ಬೆಳೆಗಳಿಗೆ ರಾಸಾಯನಿಕ ಬಳಸಿ ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗಿರುವುದೇ ಸಮಾಜದ ಅನಾರೋಗ್ಯಕ್ಕೆ ಕಾರಣ ಎಂದು ಪ್ರಗತಿಪರ ಕೃಷಿಕ ರಾಧಾಕೃಷ್ಣ ಬಂದಗದ್ದೆ ಹೇಳಿದರು.

    ಸಮೀಪದ ಮಂಚಾಲೆಯಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ತೋಟಗಾರಿಕೆ ಘಟಕದ ಕ್ಷೇತ್ರ ಪಾಠಶಾಲೆಯಲ್ಲಿ ಔಷಧೀಯ ಸಸ್ಯೋದ್ಯಾನ ರಚನೆ, ಮಾರುಕಟ್ಟೆ ಅವಕಾಶ ಹಾಗೂ ಆರೋಗ್ಯ ಪರಿಕಲ್ಪನೆ ಕುರಿತ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.

    ನಮ್ಮ ಪರಂಪರೆಯ ಆಹಾರ ಪದ್ಧತಿ ಬಿಟ್ಟು ನಾಲಿಗೆ ರುಚಿಗಾಗಿ ಪೇಟೆಯ ಆಹಾರ ಅವಲಂಬಿಸುತ್ತಿರುವುದು ರೋಗಗಳ ಹರಡುವಿಕೆಗೆ ಕಾರಣ. ಮನೆ ಹಿತ್ತಲಿನ ಪ್ರಕೃತಿದತ್ತವಾದ ಗಿಡಗಳಲ್ಲಿ ಶಕ್ತಿವರ್ಧಕ ಔಷಧೀಯ ಗುಣಗಳಿವೆ. ಆದರೆ ಆಧುನಿಕತೆ ಪರಿಕಲ್ಪನೆಯಿಂದ ಅವುಗಳ ಬಳಕೆ ಕ್ಷೀಣಿಸಿದೆ. ಯಾವ ಆಹಾರ ತಿನ್ನಬೇಕೆಂಬ ಅರಿವು ಮನುಷ್ಯನಿಗಿಂತ ಕಾಡುಪ್ರಾಣಿಗಳಿಗೇ ಚೆನ್ನಾಗಿದೆ. ಅವು ಯಾವುದೇ ಚಿಕಿತ್ಸೆ ಇಲ್ಲದೆ ಗಿಡಮೂಲಿಕೆಗಳಿಂದಲೇ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತವೆ ಎಂದು ಹೇಳಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಸದಸ್ಯ ರಘುಪತಿ ಭಟ್, ರೈತರು ಔಷಧೀಯ ಸಸ್ಯಗಳನ್ನು ಬೆಳೆಯುವುದರಿಂದ ಭವಿಷ್ಯದಲ್ಲಿ ಆದಾಯ ಗಳಿಸಬಹುದು. ಸರ್ಕಾರದಿಂದಲೂ ಔಷಧೀಯ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹ ಸಿಗಲಿದೆ ಎಂದರು.

    ಮಂಚಾಲೆಯ ಪ್ರಗತಿಪರ ಕೃಷಿಕ ಪ್ರಕಾಶ್ ಅವರ ಜಮೀನಿನಲ್ಲಿ ಬೆಳೆದ ಬಹುಮಹಡಿ ಪದ್ಧತಿಯ ಕೃಷಿ ಕ್ಷೇತ್ರವನ್ನು ವೀಕ್ಷಿಸಲಾಯಿತು. ಕೃಷಿ ಇಲಾಖೆ ಅಧಿಕಾರಿಗಳು ‘ಬೆಳೆ ದರ್ಶಕ್’ ಆಪ್ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

    ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ಅಧಿಕಾರಿ ವಿನಾಯಕ ರಾವ್ ಬೇಳೂರು, ಪ್ರಗತಿಪರ ಕೃಷಿಕರಾದ ಸುಧಾಮಣಿ, ಪ್ರಕಾಶ್, ದತ್ತಮೂರ್ತಿ ನೀಚಡಿ, ವೇಣುಗೋಪಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts