More

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ ಆಚರಣೆ

    ತುಮಕೂರು: ತ್ಯಾಗ, ಬಲಿದಾನ, ಸೋದರತೆಯ ಸಂಕೇತವಾಗಿ ಸಹಬಾಳ್ವೆ ಬೆಳಗುವ ಪ್ರೀತಿಯ ಈದ್ ಉಲ್ ಅಧಾ ಬಕ್ರಿದ್ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಲ್ಲೆಡೆ ಸಂಭ್ರಮದಿಂದ ಶನಿವಾರ ಆಚರಿಸಿದರು.

    ಕರೊನಾ ಆತಂಕದ ನಡುವೆ ಪರಸ್ಪರ ಅಂತರ ಕಾಯ್ದುಕೊಂಡು ಶನಿವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ದೂರದಿಂದಲೇ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

    ನಗರದ ಕುಣಿಗಲ್ ರಸ್ತೆಯ ಈದ್ಗಾ ಮೈದಾನದಲ್ಲಿ 50 ಜನರ ವಿವಿಧ ತಂಡಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಅಲ್ಲಾಹ್‌ನ ಆದೇಶದಂತೆ, ಪ್ರವಾದಿ ಮೊಹಮ್ಮದ್ ಅವರು ತ್ಯಾಗ-ಬಲಿದಾನದ ಅನ್ವಯ ಎಲ್ಲ ಮುಸಲ್ಮಾನ ಬಂಧುಗಳು ಬಕ್ರೀದ್ ಹಬ್ಬ ಆಚರಿಸುತ್ತಾರೆ. ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು ಪರಸ್ಪರ ಪ್ರೀತಿ ಹಂಚಿಕೊಳ್ಳಬೇಕು ಎಂದು ಮುಖಂಡರು ಸಲಹೆಯಿತ್ತರು.

    ಬಕ್ರೀದ್ ಅಂಗವಾಗಿ ಎಲ್ಲ ಮಸೀದಿ, ದರ್ಗಾಗಳಲ್ಲಿ ವಿಶೇಷ ಹೂ, ದೀಪದ ಅಲಂಕಾರ ಮಾಡಲಾಗಿತ್ತು, ನಗರದೆಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಪ್ರಾರ್ಥನೆ ಸಲ್ಲಿಸುವಾಗ ಹೃದಯಾಘಾತ!: ನಗರದ ಪ್ರಾಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕುಣಿಗಲ್ ಮೂಲದ ಪತ್ರಕರ್ತ ಫಯಾಜ್ ಉಲ್ಲಾಖಾನ್(54) ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹಬ್ಬದ ಸಂಭ್ರಮದಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts