More

    ಸಹಕಾರಿ ಸಂಸ್ಥೆ ರೈತರ ಜೀವನಾಡಿ

    ಬೈಲಹೊಂಗಲ, ಬೆಳಗಾವಿ: ರೈತರಿಗೆ ಅತ್ಯುತ್ತಮ ಸೌಲಭ್ಯ ನೀಡುತ್ತಿರುವ ನಯಾನಗರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸೊಸೈಟಿಯ ನೂತನ ಕಟ್ಟಡ ಹೊಂದುತ್ತಿರುವುದು, ಸಹಕಾರಿಯ ಉತ್ತಮ ಬೆಳವಣಿಗೆಯ ಸಂಕೇತವಾಗಿದೆ. ಸಹಕಾರಿ ಸಂಸ್ಥೆಗಳು ರೈತರ ಜೀವನಾಡಿಯಾಗಿವೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
    ತಾಲೂಕಿನ ನಯಾನಗರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸೊಸೈಟಿಯ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ರೈತರ ಹಣಕಾಸಿನ ಕೊರತೆ ನೀಗಿಸುತ್ತಿವೆ. ಅನೇಕ ರೈತಪರ ಕೆಲಸ ನಿರ್ವಹಿಸುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು. 35 ಲಕ್ಷ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿದ್ದು ಸಂತೋಷ ತಂದಿದೆ ಎಂದರು.

    ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಸರ್ಕಾರ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಡ್ಡಿ ಇಲ್ಲದೆ ಸಾಲ ಕೊಡುವ ಯೋಜನೆ ಜಾರಿಗೆ ತಂದಿದೆ. ದೇಶದ ಇನ್ನಾವುದೇ ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಗೊಂಡಿಲ್ಲ. ರೈತರ ಅಭಿವೃದ್ಧಿಗೆ ಇದು ಸಹಕಾರಿಯಾಗಿದೆ ಎಂದರು.

    ನಯಾನಗರ ಸುಖದೇವಾನಂದ ಮಠದ ಅಭಿನವಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ರೈತರು ಜಮೀನುಗಳ ಅಭಿವೃದ್ಧಿಗಾಗಿ ತೆಗೆದುಕೊಳ್ಳುವ ಸಾಲವನ್ನು ಕಷಿ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ರೈತರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಿ ಸಂಘದ ಪ್ರಗತಿಗೆ ಸಹಕರಿಸಬೇಕು ಎಂದರು.
    ಪಿಕೆಪಿಎಸ್ ಅಧ್ಯಕ್ಷ ಮುದಕಪ್ಪ ತೋಟಗಿ ಮಾತನಾಡಿ, ಗ್ರಾಮದಲ್ಲಿ 18 ವರ್ಷಗಳಿಂದ ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಪರ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು. ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.

    ಸಹಕಾರಿ ಉಪಾಧ್ಯಕ್ಷ ಚಂದ್ರಪ್ಪ ಉಜ್ಜಿನಕೊಪ್ಪ, ನಿರ್ದೇಶಕರಾದ ಭೀಮಪ್ಪ ಕರಿದೇಮನ್ನವರ, ಬಶೆಟ್ಟೆಪ್ಪ ಅಡಕಿ, ಬಸವರಾಜ ತೋಟಗಿ, ಜಗದೀಶ ಅಡಕಿ, ಬಸನಗೌಡ ಸಂಕಣ್ಣವರ, ಪಾರವ್ವ ತೋಟಗಿ, ಸುಮಿತ್ರಾ ಹಂಪಿಹೊಳಿ, ಈರಪ್ಪ ಸಂಗೊಳ್ಳಿ, ಅಡಿವೆಪ್ಪ ದಾಸರ, ಹಣುಮಂತ ಕಾಳೆ, ಬಾಲಪ್ಪ ಉಳ್ಳಿಗೇರಿ, ವೆಂಕಟೇಶ ಪೂಜೇರಿ, ಮಲ್ಲನಗೌಡ ಪಾಟೀಲ, ಮುಖ್ಯ ನಿರ್ವಾಹಕ ದುಂಡಪ್ಪ ಕಾಲಗಗ್ಗರಿ, ಈರಣ್ಣ ವಾರದ, ಹಿರಿಯರಾದ ದೇಮನಗೌಡ ಶೀಲವಂತರ, ಉಡಚಪ್ಪ ಸಂಕನ್ನವರ, ಪ್ರಕಾಶ ವೀರನಗೌಡ ಹುಲೆಪ್ಪನ್ನವರ, ನಿಂಗಪ್ಪ ಹಳಗೋಡಿ, ಮಲ್ಲಪ್ಪ ಕಾಂಬಳೆ, ಶಿವಾಜಿ ಕಲಾಲ, ರಮೇಶ ಸಂಗೊಳ್ಳಿ, ರವಿ ಹುಡೇದ, ಈರಣ್ಣ ಉಗರಖೋಡ, ಫಕೀರಪ್ಪ ತೋಟಗಿ, ಇಂಜಿನಿಯರ್ ವೀರೇಶ ಹೊಳೆಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts