More

    ಸಸ್ಯ ಸಂಕುಲ ಬೆಳೆಸಲು ಮುಂದಾಗಿ

    ಸವಣೂರ: ಪರಿಸರ ಶುದ್ಧ, ಸಮತೋಲನವಾಗಿದ್ದಲ್ಲಿ ಮನುಷ್ಯ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ, ಸಸ್ಯ ಸಂಕುಲ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎನ್. ಕೆ. ಪಾಟೀಲ ಹೇಳಿದರು.

    ಪಟ್ಟಣದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಕುಟುಂಬ ಪರ್ಯಾವರಣ ಸಪ್ತಾಹದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ರೋಗ, ನೆರೆ ಹಾವಳಿಯ ಸಂದರ್ಭದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್​ನ ಸಂದಿಗ್ಧತೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಜನ ಮರಣ ಹೊಂದಿದ್ದಾರೆ. ಇಂದಿನ ದಿನಮಾನಗಳಲ್ಲಿ ಪರಿಸರ ಮಾಲಿನ್ಯದಿಂದಾಗಿ, ಆಮ್ಲಜನಕದ ಕೊರತೆ ಜೀವಕ್ಕೆ ಕಂಟಕವಾಗುತ್ತಿದೆ. ಹಸಿರಿದ್ದರೆ ಉಸಿರು ಎಂಬ ಸದುದ್ದೇಶದೊಂದಿಗೆ, ಜೆಸಿಐ ಸಂಸ್ಥೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

    ಪರಿಸರ ಮಾಲಿನ್ಯ ಉಂಟುಮಾಡುವ ವಾಹನಗಳ ಬದಲಾಗಿ, ಸ್ನಾಯು ಬಲದಿಂದ ಸೈಕಲ್ ಬಳಸಿದಲ್ಲಿ ಉತ್ತಮ ಪರಿಸರದ ಜತೆಗೆ ನಮ್ಮ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬಹುದು ಎಂದರು.

    ಪುರಸಭೆ ಮಾಜಿ ಸದಸ್ಯ ಸಂಗಮೇಶ ಯರೇಸಿಮಿ ಪರಿಸರ ಜಾಗೃತಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಸಂತೋಷ ಗುಡಿಸಾಗರ, ಪದಾಧಿಕಾರಿಗಳಾದ ವಿದ್ಯಾಧರ ಕುತನಿ, ಯೋಗೇಂದ್ರ ಜಂಬಗಿ, ಆನಂದ ಮತ್ತಿಗಟ್ಟಿ, ಗಣೇಶಗೌಡ ಪಾಟೀಲ, ಶಂಕ್ರಯ್ಯ ಹಿರೇಮಠ, ಸುಧಾ ಅರಬಗೊಂಡ, ನಿಂಗನಗೌಡ ದೊಡ್ಡಗೌಡ್ರ, ಡಾ. ಮಹಾಂತೇಶ ಕುತನಿ, ಬಸವರಾಜ ಶಿರೂರ ಇತರರು ಪಾಲ್ಗೊಂಡಿದ್ದರು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ಮೂಲಕ ಪರಿಸರ ಕುರಿತು ಜಾಗೃತಿ ಮೂಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts