More

    ಸವಿತಾ ಮಹರ್ಷಿ ಯುಗಪುರುಷ

    ಚಿತ್ರದುರ್ಗ: ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷರೆಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಬಣ್ಣಿಸಿದರು.
    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಡಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಚರ್ತುವೇದಗಳಲ್ಲಿ ಒಂದಾದ ಸಂಗೀತ ವೇದ ಎಂದೇ ಕರೆಯುವ ಸಾಮ ವೇದ ರಚಿಸಿದ ಮಹಾನ್ ಬ್ರಹ್ಮಜ್ಞಾನಿ ಸವಿತಾ ಮಹರ್ಷಿ ಎಂದರು.
    ಸಾಮವೇದವು ಸಂಗೀತದ ಮೂಲಗ್ರಂಥವಾಗಿದ್ದು, ಹಾಗಾಗಿ ಸವಿತಾ ಸಮಾಜದವರು ಸಂಗೀತ, ವೈದ್ಯ ಹಾಗೂ ಕ್ಷೌರಿಕ ವೃತ್ತಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಸಂತ. ಅವರ ಆದರ್ಶಗಳು ಸರ್ವರಿಗೂ ದಾರಿ ದೀಪವಾಗಿವೆ ಎಂದು ಹೇಳಿದರು.
    ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಮಾತನಾಡಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಮಹಾನ್ ವ್ಯಕ್ತಿಗಳ ತತ್ವ, ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
    ಗ್ರೇಡ್-2 ತಹಸೀಲ್ದಾರ್ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಮುಖಂಡರಾದ ವಿ.ರಂಜಿತ್, ಶ್ರೀನಿವಾಸ್, ಘನಶ್ಯಾಮ್, ಸಂತೋಷ್, ಕೆ.ನಾಗರಾಜ್, ಕುಮಾರ್ ಧರ್ಮಣ್ಣ, ಕೆ.ಶ್ರೀನಿವಾಸ್, ಎಸ್.ಮಾರಣ್ಣ, ರಾಜಣ್ಣ, ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು. ಹಿರಿಯೂರಿನ ತ್ರಿವೇಣಿ ತಂಡದವರು ಗೀತಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts