More

    ಸರ್ವೆ ಕಾರ್ಯಕ್ಕೆ ಬಳಸಿದ್ದ ಮೀನುಗಾರಿಕೆ ಬೋಟ್ ವಶ

    ಕಾರವಾರ: ಬೈತಖೋಲ್​ನಲ್ಲಿ ಸರ್ವೆ ಕಾರ್ಯ ನಡೆಸಿದ್ದ ಮೀನುಗಾರಿಕೆ ಬೋಟ್​ನ್ನು ಸ್ಥಳೀಯ ಮೀನುಗಾರರು ಹಿಡಿದಿಟ್ಟ ಘಟನೆ ಶುಕ್ರವಾರ ನಡೆದಿದೆ.

    ಅಂಕೋಲಾ ನೋಂದಣಿ ಸಂಖ್ಯೆ ಹೊಂದಿದ ಶಾಂತಾದುರ್ಗಾ ಹೆಸರಿನ ಔಟ್ ಬೋರ್ಡ್ ಇಂಜಿನ್​ನ ಟ್ರಾಲರ್ ಬೋಟ್​ನಲ್ಲಿ ಬಂದ ನಾಲ್ವರು ಬೈತಖೋಲ್​ನಲ್ಲಿ ಅಲೆಗಳ ಎತ್ತರ ಹಾಗೂ ಇನ್ನಿತರ ಸರ್ವೆ ಕಾರ್ಯ ನಡೆಸಿದ್ದರು ಎನ್ನಲಾಗಿದೆ.

    ಸಾಗರ ಮಾಲಾ ಯೋಜನೆಯಲ್ಲಿ ನಿರ್ವಣವಾಗಲಿರುವ ಬಂದರುಗಳ ಸಂಬಂಧ ಸಿಡಬ್ಲ್ಯುಪಿಆರ್​ಎಸ್ ಎಂಬ ಕಂಪನಿ ಸರ್ವೆ ಕಾರ್ಯದ ಜವಾಬ್ದಾರಿ ಪಡೆದಿದೆ. ಅದರಿಂದ ಉಪ ಗುತ್ತಿಗೆ ಪಡೆದ ಜಿಯೋ ಸರ್ವೀಸ್ ಪ್ರೖೆ. ಲಿ. ಎಂಬ ಕಂಪನಿಯ ಸಿಬ್ಬಂದಿ ಮೀನುಗಾರಿಕೆ ಬೋಟ್​ನಲ್ಲಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ಅನುಮತಿ ಇಲ್ಲದೆ ಸರ್ವೆ ಕಾರ್ಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಅದನ್ನು ವಶಕ್ಕೆ ಪಡೆದರು. ಈ ಕುರಿತು ಪ್ರತಿಕ್ರಿಯಿಸಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ‘ಮೀನುಗಾರಿಕೆ ಬೋಟ್​ನಲ್ಲಿ ಜನರನ್ನು ಸಾಗಿಸುವುದು ಅಥವಾ ಸರ್ವೆ ಕಾರ್ಯ ನಡೆಸಲು ಅವಕಾಶವಿಲ್ಲ. ಬೈತಖೋಲ್​ನಲ್ಲಿ ಅನ್ಯಕಾರ್ಯಕ್ಕೆ ಬೋಟ್ ಬಳಸುತ್ತಿರುವ ಕುರಿತು ನಮಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಬೋಟ್ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೊದಲ ಬಾರಿ ಎಚ್ಚರಿಕೆ ನೀಡಲಾಗುವುದು. ನಂತರ ದಂಡ ವಿಧಿಸಲಾಗುವುದು’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts