More

    ಸರ್ವರಿಗೂ ಸೂರು ಸಮಸ್ಯೆ ಹತ್ತಾರು!

    ಗದಗ: ಕುಡಿಯಲು ನೀರಿಲ್ಲ, ರಸ್ತೆಗಳು ಸಮರ್ಪಕವಾಗಿಲ್ಲ, ಬೀದಿ ದೀಪಗಳು ಬೆಳಗುತ್ತಿಲ್ಲ, ಮಳೆಯಾದರೆ ಕೆಸರುಮಯ, ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯಾರೂ ಕೇಳುವವರಿಲ್ಲ.\

    ಇದು ನಗರದ ಗಂಗಿಮಡಿ ಎರಡನೇ ಹಂತದ ಪ್ರದೇಶದ ನಿವಾಸಿಗಳ ಅಳಲು.

    ಕೇಂದ್ರ ಸರ್ಕಾರದ ಸರ್ವರಿಗೂ ಸೂರು ಯೋಜನೆಯಡಿ 200 ನಿವೇಶನಗಳ ಜಾಗದಲ್ಲಿ 50 ಮನೆಗಳನ್ನು ಈ ಪ್ರದೇಶದಲ್ಲಿ ನಿರ್ವಿುಸಲಾಗಿದೆ. ಈ ಯೋಜನೆ ರೂಪಿಸುವಾಗ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ಅಂದಿನ ಶಾಸಕರು, ಸಚಿವರು, ಜಿಲ್ಲಾಧಿಕಾರಿ, ಪೌರಾಯುಕ್ತರು, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕರು ಭರವಸೆ ನೀಡಿ ನಿವೇಶನ ಪಡೆದ ಫಲಾನುಭವಿಗಳಿಗೆ ಮನೆ ನಿರ್ವಿುಸಿಕೊಳ್ಳಲು ಸೂಚಿಸಿದ್ದರು.

    ಅದರಂತೆ ಫಲಾನುಭವಿಗಳು ಮನೆ ನಿರ್ವಿುಸಿಕೊಂಡು ವಾಸವಾದರು. ಆದರೆ, ನಾಲ್ಕು ವರ್ಷ ಕಳೆದರೂ ನಿವಾಸಿಗಳಿಗೆ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಲಾಗಿಲ್ಲ. ರಸ್ತೆ ಹಾಗೂ ಚರಂಡಿಗಳು ಇಲ್ಲದಿರುವುದರಿಂದ ಮಳೆ ನೀರು ನಿಂತಲ್ಲೇ ನಿಂತು ಮಾಲಿನ್ಯ ಉಂಟುಮಾಡುತ್ತಿದೆ. ಈ ಪ್ರದೇಶ ಹೊಂಡದಂತಾಗಿದ್ದು, ನಿವಾಸಿಗಳ ನೆಮ್ಮದಿ ಹಾಳಾಗಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಸ್ವಚ್ಛತೆ ಇರದ ಕಾರಣ ಹಾವು, ಚೇಳು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇಲ್ಲಿನ ಕಲುಷಿತ ವಾತಾವರಣದಿಂದ ಜನತೆ ಸಾಂಕ್ರಾಮಿಕ ರೋಗಗಳಿಗೂ ತುತ್ತಾಗಿದ್ದಿದೆ. ಜನತೆ ನಿತ್ಯ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.

    ನೀರಿಗಾಗಿ ಪರದಾಟ: ಈ ಪ್ರದೇಶಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಕಾರಣ ಜನರು ಪರದಾಡುತ್ತಿದ್ದಾರೆ. ನೀರಿಗಾಗಿ ಕಾಯುತ್ತ ಕುಳಿತುಕೊಳ್ಳುವ ಸ್ಥಿತಿ ಇಲ್ಲಿ ನಿರ್ವಣವಾಗಿದೆ.

    ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ವಾಸ್ತವಿಕ ಸ್ಥಿತಿ ಅವಲೋಕಿಸಿ ತುರ್ತಾಗಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ನಾಗಪ್ಪ ಓಬಾಜಿ, ಕುಮಾರ ಜಾಧವ, ಮಹೇಶ ಮಲ್ಲಣ್ಣವರ, ರಾಮಪ್ಪ ಚಕ್ರಸಾಲಿ, ಗಂಗಾಧರ ಹೂಗಾರ, ರವಿ ಜಂಗಮನಿ, ಇತರರು ಒತ್ತಾಯಿಸಿದ್ದಾರೆ.

    ಬೀದಿ ಬದಿ ದೀಪಗಳಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಜನರು ಹೊರಗೆ ಓಡಾಡಲು ಭಯ ಪಡುವ ವಾತಾವರಣ ನಿರ್ವಣವಾಗಿದೆ. ಅಲ್ಲಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಹದಗೆಟ್ಟ ರಸ್ತೆಯಲ್ಲಿ ಕತ್ತಲಲ್ಲಿ ನಡೆದಾಡುವುದು ಸಾವಾಲಿನ ಕೆಲಸವಾಗಿದೆ. ಇನ್ನು ಮಕ್ಕಳು ಮರಿಗಳನ್ನು ಮನೆಯಿಂದ ಹೊರ ಕಳಿಸಲೂ ಪಾಲಕರು ಹಿಂದೆಮುಂದೆ ನೋಡುವಂತಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts