More

    ಸರ್ವತೋಮುಖ ವಿಕಸನಕ್ಕೆ ಕ್ರೀಡೆ ಅಗತ್ಯ

    ಕಲಬುರಗಿ: ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಕ್ರೀಡೆ ಮುಖ್ಯ. ಪೋಷಕರು ಮಕ್ಕಳಿಗೆ ಪಠ್ಯದಷ್ಟೇ ಕ್ರೀಡೆಯಲ್ಲೂ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಕರೆ ನೀಡಿದರು.
    ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ದೈಹಿಕ ವ್ಯಾಯಾಮ ನೀಡುವ ಆಟಗಳನ್ನು ಮಕ್ಕಳು ಆಡಬೇಕು ಎಂದರು.
    ಡಿವೈಎಸ್ಪಿ (ಡಿಸಿಆರ್ಬಿ) ಜೇಮ್ಸ್ ಮೇನೆಜಿಸ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಅಪೇಕ್ಷಿಸುತ್ತಾರೆ. ಕ್ರೀಡೆಯನ್ನೂ ವೃತ್ತಿಪರ ಕೋರ್ಸ  ತರಹ ನೋಡುವುದಿಲ್ಲ ಎಂದರು.
    ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಭಾಸ್ಕರ ನಾಯಕ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದರು.
    ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಆಸಕ್ತಿ ಹಾಗೂ ಪೋಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಒದಗಿಸಿಕೊಡಲು ಸಾಧ್ಯವಿದೆ ಎಂದರು.
    ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕೃಷ್ಣಾ ಸದನದ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ಪಡೆದರೆ, ಯಮುನಾ, ಕಾವೇರಿ ಹಾಗೂ ಗಂಗಾ ಸದನಗಳು ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ತೃಪ್ತಿ ಪಡಬೇಕಾಯಿತು. ಪೋಷಕರು ಹಾಗೂ ಶಾಲಾ ಸಿಬ್ಬಂದಿ 100 ಮೀ. ಓಟದಲ್ಲಿ ಭಾಗವಹಿಸಿ ಗಮನಸೆಳೆದರು.
    ಶಾಲಾ ಶೈಕ್ಷಣಿಕ ನಿರ್ದೇಶಕಿ ಸೌಮ್ಯಾ ಭಜಂತ್ರಿ, ಪ್ರಕಾಶ ಕವಿಶೆಟ್ಟಿ ಇದ್ದರು. ಶಿಕ್ಷಕರಾದ ಅಂಬಿಕಾ ರೆಡ್ಡಿ ಹಾಗೂ ಸಹನಾ ನಿರೂಪಣೆ ಮಾಡಿದರು. ದೈಹಿಕ ಶಿಕ್ಷಕ ದೇವೀಂದ್ರಪ್ಪ ವಂದಿಸಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts