More

    ಸರ್ವಋತು ದಾರಿ ನಿರ್ಮಾಣಕ್ಕೆ ಆಗ್ರಹ

    ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕಸಿಗೆಯಿಂದ ಹುಟ್ಲೆ-ಹಾಸಗೋಡ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಸರ್ವಋತು ರಸ್ತೆಯನ್ನಾಗಿ ಮಾಡಿ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ಹಾವಿನಬೀಳ, ಹುಟ್ಲೆ, ಹಾಸಗೋಡ, ಕಾನ್ಮನೆ, ಉಳ್ಳಾಣೆಜಡ್ಡಿ ಮತ್ತಿತರ ಊರುಗಳಿದ್ದು ಇಲ್ಲಿ ಸುಮಾರು ಮೂವತ್ತು ಮನೆಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ, ಊರಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲದೆ ಪರದಾಡುವಂತಾಗಿದೆ.

    ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ನಮಗೆ ಮೂಲ ಸೌಲಭ್ಯ ದೊರೆಯದಂತಾಗಿದೆ. ಪ್ರತಿವರ್ಷ ಊರವರೇ ಸೇರಿ ತಮ್ಮೂರಿನ ಐದು ಕಿ..ಮೀ.ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದು ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಮೂರ್ನಾಲ್ಕು ವರ್ಷಕ್ಕೆ ಅಲ್ಪ ಸ್ವಲ್ಪ ಹಣ ನೀಡುತ್ತಿದ್ದಾರೆಯೇ ವಿನಃ ಶಾಶ್ವತವಾಗಿ ರಸ್ತೆ ಅಭಿವೃದ್ಧಿಗೆ ಕಿಂಚಿತ್ತು ಗಮನ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

    ಮಳೆಗಾಲದ ನಾಲ್ಕೈದು ತಿಂಗಳು ಊರಿಗೆ ಯಾವುದೇ ವಾಹನ ಸರಾಗವಾಗಿ ಬಂದು ಹೋಗುವ ಹಾಗಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರನ್ನು ಕಂಬಳಿ ಜೋಲಿ ಮೇಲೆ ನಾಲ್ಕೈದು ಕಿ.ಮೀ. ಹೊತ್ತುಕೊಂಡು ಮುಖ್ಯ ರಸ್ತೆಗೆ ಹೋಗಿದ್ದು ಇದೆ. ಕಳೆದ ಮೂರು ವರ್ಷದ ಹಿಂದೆ ಮುಖ್ಯ ರಸ್ತೆಗೆ ಹೊತ್ತುಕೊಂಡು ಹೋಗುವುದರೊಳಗೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ ಎಂದು ನೆನಪಿಸಿ ಕೊಳ್ಳುತ್ತಾರೆ.

    ಕ್ಷೇತ್ರದ ಶಾಸಕರು ಬರುವ ಮಾರ್ಚ ತಿಂಗಳೊಳಗೆ ಊರಿಗೆ ಸರ್ವಋತು ರಸ್ತೆ ನಿರ್ವಿುಸಿ ಕೊಡಬೇಕು. ಒಮ್ಮೆ ರಸ್ತೆ ನಿರ್ವಿುಸಿಕೊಡದಿದ್ದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಹಾಗೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ನೀಡಲಾಗುವುದು. | ವಿನಾಯಕ ಆರ್. ನಾಯ್ಕ ದೊಡ್ಡಗದ್ದೆ ಸ್ಥಳೀಯ ಮುಖಂಡರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts