More

    ಸರ್ಕಾರಿ ಶಾಲೆಯ ಅಡುಗೆ ಮನೆ ಬೀಗ ಒಡೆದು ಸಿಲಿಂಡರ್ ಕಳವು

    ಹಾಸನ: ಹಾಸನ ತಾಲೂಕಿನ ಕಿಂಡಿಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಮನೆಯ ಬೀಗವನ್ನು ಒಡೆದ ಖದೀಮರು ಗ್ಯಾಸ್ ತುಂಬಿದ ಸಿಲಿಂಡರ್‌ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

    ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಖದೀಮರು ಬೀಗ ಒಡೆದು ಅಡುಗೆ ಮನೆಯಲ್ಲಿ ತುಂಬಿದ ಅಡುಗೆ ಅನಿಲ ಸಿಲಿಂಡರ್ ಕದ್ದೊಯ್ದಿದ್ದಾರೆ. ಹಾಗೆಯೇ ಉಗ್ರಾಣ ಕೊಠಡಿ, ತರಗತಿ ಕೊಠಡಿಯ ಡೋರ್ ಲಾಕ್ ಹಾಗೂ ಬೀಗಗಳನ್ನು ಒಡೆದು ಹಾಕಿದ್ದಾರೆ. ಶನಿವಾರ ಬೆಳಗ್ಗೆ ಶಾಲೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಖದೀಮರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮದ ಕೆ.ಜಿ. ನಾಗರತ್ನಾ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts