More

    ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ವಿುಸಿ

    ಗದಗ: ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಉದ್ಯಾನ ಹಾಗೂ ಕೈತೋಟಗಳನ್ನು ನಿರ್ವಿುಸಬೇಕು ಎಂದು ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲೆ ಆವರಣದಲ್ಲಿ ಕೈತೋಟ ನಿರ್ವಿುಸಲು ತೋಟಗಾರಿಕೆ ಇಲಾಖೆ ವತಿಯಿಂದ ಅವಕಾಶವಿದೆ. ಹೀಗಾಗಿ ತೋಟಗಾರಿಕೆ, ಶಿಕ್ಷಣ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

    ‘ಹೂವು ಬೆಳೆವ 373 ರೈತರ ಖಾತೆಗಳಿಗೆ 44.34 ಲಕ್ಷ ರೂ. ಜಮಾ ಮಾಡಲಾಗಿದೆ. ಹಣ್ಣು ತರಕಾರಿ ಬೆಳೆಯುವ 2779 ರೈತರಿಗೆ 328.34 ಲಕ್ಷ ರೂ.ಗಳನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಆವರಣಗಳಲ್ಲಿ 215 ಕೈತೋಟ ಹಾಗೂ ಉದ್ಯಾನ ನಿರ್ವಿುಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಜಿಲ್ಲೆಯ 1.83 ಲಕ್ಷ ರೈತರ ಪೈಕಿ 64 ಸಾವಿರ ರೈತರಿಗೆ 56 ಕೋಟಿ ರೂ. ಪರಿಹಾರ ವಿತರಿಸಿ ಶೇ. 40ರಷ್ಟು ಗುರಿ ಸಾಧಿಸಲಾಗಿದೆ. ಉಳಿದ ರೈತರಿಗೆ ಶೀಘ್ರವೇ ಪರಿಹಾರ ವಿತರಿಸಲಾಗುವುದು ಎಂದರು.

    ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಮನಗೂಳಿ ಮಾತನಾಡಿ, ಜಿಲ್ಲೆಯ ಎಸ್.ಸಿ. ಎಸ್.ಟಿ. ಸಮುದಾಯ ಸಾಕುವ ರಾಸುಗಳಿಗೆ ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ವಿಮೆ ಮಾಡಿಸಲಾಗುವುದು. ಅದರಂತೆ ಸಾಮಾನ್ಯ ರೈತರಿಗೆ ಶೇ. 70 ರಷ್ಟು ವಿಮೆ ಸಬ್ಸಿಡಿ ದೊರೆಯಲಿದೆ ಎಂದರು.

    ಕಳೆದ ಮೂರು ವರ್ಷಗಳಿಂದ 4.38 ಕೋಟಿ ರೂ. ಕುರಿ ಸೇರಿದಂತೆ ಇತರ ಜಾನುವಾರುಗಳ ಜೀವಹಾನಿ ಪರಿಹಾರ ನೀಡಬೇಕಿದೆ ಎಂದು ಮಾಹಿತಿ ನೀಡಿದರು.

    ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷ, ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ರೈತರಿಗೆ ನಬಾರ್ಡ್ ಮೂಲಕ ನೆರವು ಕೊಡಿಸಿ ಪ್ರೋತ್ಸಾಹ ನೀಡಬೇಕು ಎಂದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಆಯುಷ್ಯ ಇಲಾಖೆ ಅಧಿಕಾರಿ ಡಾ. ಸುಜಾತ ಪಾಟೀಲ ಅವರು ಇಲಾಖೆ ಪ್ರಗತಿ ವಿವರಿಸಿದರು. ಜಿಪಂ ಸಿಇಒ ಡಾ.ಆನಂದ, ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಮತ್ತಿತರರು ಇದ್ದರು.

    ಇಲಾಖೆಗಳಿಗೆ ನಿಗದಿಪಡಿಸಿದ ಗುರಿಗಳನ್ನು ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿ ಅನುದಾನ ಹಿಂದಿರುಗಿ ಹೋಗದಂತೆ ಅಧಿಕಾರಿಗಳು ನಿಗಾವಹಿಸಬೇಕು.

    | ಡಾ.ಆನಂದ. ಕೆ., ಜಿಪಂ ಸಿಇಒ

    2020ರ ಮುಂಗಾರಿನಲ್ಲಿ ಜಿಲ್ಲೆಯ 7 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೊಷಿಸಲಾಗಿದೆ. ಸ್ಥಳೀಯ ಗಂಡಾಂತರ ಯೋಜನೆಯಡಿ ಜಿಲ್ಲೆಯ ರೈತರಿಗೆ 100 ಕೋಟಿ ರೂ. ಪರಿಹಾರ ದೊರೆಯಲಿದೆ. ಜಿಲ್ಲೆಯಲ್ಲಿ ಶೇ. 54ರಷ್ಟು ರೈತರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಬಾಕಿ ಉಳಿದ ಸಮೀಕ್ಷೆಯನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ.

    | ಟಿ.ಎಸ್. ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts