More

    ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆಗ್ರಹಿಸಿ ಪ್ರತಿಭಟನೆ

    ಹಿರೇಕೆರೂರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್​ದಿಂದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಫೆಡರೇಷನ್ ತಾಲೂಕಾಧ್ಯಕ್ಷೆ ನೀಲಮ್ಮ ವಾಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಲವಾರು ವರ್ಷಗಳಿಂದ ಅಲ್ಪ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಂದಾಗಿ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತದೆ. ಇದರಿಂದ 46 ವರ್ಷಗಳ ಐಸಿಡಿಎಸ್ ಯೋಜನೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಎಲ್​ಕೆಜಿ, ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ತೆರೆಯಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ಪಠ್ಯಪುಸ್ತಕ, ಸಮವಸ್ತ್ರ ಒದಗಿಸಬೇಕು. ಸರ್ಕಾರಿ ಪ್ರಾಥಮಿಕ ಶಾಲೆಗೆ ಮಕ್ಕಳು ದಾಖಲಾಗಲು ಅಂಗನವಾಡಿ ಕೇಂದ್ರದಿಂದಲೇ ವರ್ಗಾವಣೆ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ರಿಯಾಜುದ್ದೀನ್ ಭಾಗವಾನ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.ಫೆಡರೇಷನ್ ಕಾರ್ಯದರ್ಶಿ ಪಾರ್ವತಿ ಹಾದ್ರಿಹಳ್ಳಿ, ಖಜಾಂಚಿ ಸುನೀತಾ ಮರ್ಕಳ್ಳಿ, ಕುಸುಮಾ ಪಾಟೀಲ, ನೀಲಮ್ಮ ವೀರಾಪುರ, ಪ್ರೇಮಾ ಸಿದ್ದಪ್ಪಗೌಡ್ರ, ಸರೋಜಾ ಚಕ್ರಸಾಲಿ, ಕಮಲಾ ಬೂದಿಹಾಳ, ನೇತ್ರಾವತಿ ಅಂಗಡಿ, ಪುಷ್ಪಾ ಬಾಲಣ್ಣನವರ, ಪ್ರೇಮಾ ಹಂಸಭಾವಿ, ಫರೀದಾಬಾನು ಪಾಟೀಲ, ರೇಷ್ಮಾಬಾನು ಮುದ್ದಿನಕೊಪ್ಪ, ರೇಖಾ ಕೊಪ್ಪದ, ಪುಟ್ಟಮ್ಮ ಬಂಡೇರ, ಅನುಪಮಾ ಗಿರಣಿ ಹಾಗೂ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts