More

    ಸರ್ಕಾರಿ ಕಚೇರಿ ಅಧಿಕಾರ ಹಸ್ತಾಂತರಕ್ಕೆ ಮನವಿ

    ನಿಪ್ಪಾಣಿ: ತಾಲೂಕು ಘೋಷಣೆ ಆಗಿ ಕಚೇರಿ ಆರಂಭವಾಗಿವೆ. ಆದರೆ, ಕೆಲ ಕಚೇರಿಗಳಲ್ಲಿ ಪೂರ್ಣ ಪ್ರಭಾರ ಹಸ್ತಾಂತರ ಆಗಿರುವುದಿಲ್ಲ. ಪೂರ್ಣ ಪ್ರಮಾಣದ ಪ್ರಭಾರ ಮತ್ತು ಇನ್ನೂ ಹಸ್ತಾಂತರ ಆಗಬೇಕಾದ ಅಧಿಕಾರದ ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ನಿಪ್ಪಾಣಿ ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಇನ್ನೂ ಕಚೇರಿಗಳಿಗೆ ಪೂರ್ಣ ಪ್ರಮಾಣದ ಪ್ರಭಾರ ಹಸ್ತಾಂತರ ಆಗಿಲ್ಲ. ತಾಲೂಕು ಪಂಚಾಯಿತಿ ಕಾರ್ಯಾಲಯ, ಟ್ರೇಜರಿ (ಖಜಾನೆ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಗೆ ಪೂರ್ಣ ಪ್ರಮಾಣದ ಪ್ರಭಾರ ಹಸ್ತಾಂತರಿಸಬೇಕೆಂದು ಎಂದು ಮನವಿ ಮೂಲಕ ಒತ್ತಾಯಿಸಿದರು.

    ಜತೆಗೆ ನಿಪ್ಪಾಣಿ ತಾಲೂಕು ಸರ್ಕಾರಿ ನೌಕರರ ಭವನ ಕಟ್ಟಡ ನಿರ್ಮಾಣವಾಗಬೇಕು ಎಂದು ಕೋರಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ವೈ. ಗೋಕಾರ, ಕಾರ್ಯದರ್ಶಿ ಪ್ರಶಾಂತ ರಾಮನಕಟ್ಟಿ, ಖಜಾಂಚಿ ಸಂಜೀವ ಖಾಮಕರ, ಅರವಿಂದ ಕಾಂಬಳೆ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts