More

    ಸರ್ಕಾರಗಳೊಂದಿಗೆ ನಾವೆಲ್ಲರೂ ಕೈಜೋಡಿಸಬೇಕು: ಬಿಬಿಎಂಪಿ ಮಾಜಿ ಸದಸ್ಯ ಎಂಟಿಬಿ ರಾಜೇಶ್ ಮನವಿ

    ಬೆಂಗಳೂರು ಗ್ರಾಮಾಂತರ : ಕರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಉಚಿತ ವ್ಯಾಕ್ಸಿನ್ ಮೂಲಕ ಸೋಂಕು ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರದೊಂದಿಗೆ ನಾವೆಲ್ಲರೂ ಕೈಜೋಡಿಸಿ ಕರೊನಾ ಮಹಾಮಾರಿ ಕಟ್ಟಿಹಾಕಬೇಕಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಪುತ್ರ ಹಾಗೂ ಬಿಬಿಎಂ ಮಾಜಿ ಸದಸ್ಯ ಎಂಟಿಬಿ ರಾಜೇಶ್ ಮನವಿ ಮಾಡಿದರು.
    ಜಡಿಗೇನಹಳ್ಳಿ ಹೋಬಳಿಯ ಮುಗಬಾಳ ಗ್ರಾಪಂ ವ್ಯಾಪ್ತಿಯ ಮುಗಬಾಳ, ಕೆಂಬಳಿಗಾನಹಳ್ಳಿ, ಚಿಕ್ಕನಹಳ್ಳಿ, ಗಡಿಗೇನಹಳ್ಳಿ, ಅಟ್ಟೂರು, ಗೊಟ್ಟಿಪುರ, ನಿಡಗಟ್ಟ, ಹಲಸಹಳ್ಳಿ, ನಕ್ಕನಹಳ್ಳಿ ಗ್ರಾಮಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಎಲ್ಲ ಹೊರೆಯನ್ನು ಸರ್ಕಾರದ ಮೇಲೆ ಹೊರೆಸುವ ಬದಲು ನಾವೂ ಕೈಲಾದ ಸಹಾಯ ಮಾಡಬೇಕೆಂದು ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಹೊಸಕೋಟೆ ಕ್ಷೇತ್ರದಾದ್ಯಂತ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಕರೊನಾ ಸೋಂಕಿನ ತೀವ್ರತೆ ನಿಯಂತ್ರಿಸಲು ಲಾಕ್‌ಡೌನ್ ಪ್ರಯೋಗ ಅನಿವಾರ್ಯವಾಗಿತ್ತು. ಈಗ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೆ ಕರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೈಮರೆಯಬಾರದು. ಅರ್ಥಿಕ ಚಟುವಟಿಕೆಗಳೊಂದಿಗೆ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

    ಸಚಿವರ ಅನುಪಸ್ಥಿತಿಯಲ್ಲಿ ಪುತ್ರನ ಕಾರ್ಯ: ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಗುರುವಾರ ಕರ್ತವ್ಯ ನಿಮಿತ್ತ ವಿಧಾನಸೌಧಕ್ಕೆ ತೆರಳಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಪುತ್ರ ಎಂಟಿಬಿ ರಾಜೇಶ್ ಉಚಿತ ಲಸಿಕಾ ಅಭಿಯಾನ ಹಾಗೂ ದಿನಸಿಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಳೆದ ಲಾಕ್‌ಡೌನ್ ಆರಂಭದ ದಿನದಿಂದಲೂ ಹೊಸಕೋಟೆ ಕ್ಷೇತ್ರಾದ್ಯಂತ ಸಚಿವ ಎಂಟಿಬಿ ನಾಗರಾಜ್ ನಿರಂತರವಾಗಿ ದಿನಸಿ ಕಿಟ್ ವಿತರಣೆ ಹಾಗೂ ಉಚಿತ ಲಸಿಕಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದು, ಗುರುವಾರ ಪುತ್ರ ಎಂಟಿಬಿ ನಾಗರಾಜ್ ಅದನ್ನು ಮುಂದುವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts