More

    ಸರಿ – ತಪ್ಪು ಸತೀಶ ಆತ್ಮಸಾಕ್ಷಿಗೆ ಬಿಡುವೆ – ಬಸವರಾಜ ಬೊಮ್ಮಾಯಿ

    ಬೆಳಗಾವಿ: ಸತೀಶ ಜಾರಕಿಹೊಳಿ “ಹಿಂದು’ ಪದದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡುವುದು ಅಷ್ಟೇ ಅಲ್ಲ. ಸಮರ್ಥನೆ ಮಾಡುವ ಸಾಹಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಪದದ ಬಗ್ಗೆ ಮಾತನಾಡಿ ಈಗ ಈ ವಿಷಾದ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ&ತಪ್ಪು ಎನ್ನುವುದನ್ನು ಅವರ ಆತ್ಮಸಾಕ್ಷಿಗೆ ಬಿಡುತ್ತೇವೆ. ಸತೀಶ ಅವರು ದುಡುಕುವವರಲ್ಲ. ಆದರೆ, ಕಾಂಗ್ರೆಸ್​ ಸಹವಾಸ, ಸಂಸತಿಯಿಂದ ಅವರು ಹೀಗೆ ಮಾತನಾಡಿದ್ದಾರೆ ಎಂದರು.

    ಕಾಂಗ್ರೆಸ್​ನ ಸಂಸತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜತೆ ಕೈ ಜೋಡಿಸುವುದು. ಅಧಿಕಾರಕ್ಕಾಗಿ ಹಿಂದುಗಳನ್ನು ದ್ವೇಷಿಸುತ್ತಾರೆ. ಅವರಿಗೆ ದೇಶದ ಬಗ್ಗೆ ಅಭಿಮಾನವಾಗಲಿ,ಪ್ರೀತಿಯಾಗಲಿ ಎಳ್ಳಷ್ಟು ಇಲ್ಲ. ಅದಕ್ಕೆ ಹತ್ತು, ಹಲವು ಉದಾಹರಣೆಗಳಿವೆ. ಮತಕ್ಕಾಗಿ ಮಾಡುವ ಕೆಟ್ಟ ರಾಜಕಾರಣ ನಿಲ್ಲಿಸಲಿ. ಸತೀಶ ಜಾರಕಿಹೊಳಿ ಅವರ ಪತ್ರದಲ್ಲಿ ಏನಿದೆ ನೋಡುತ್ತೇನೆ. ಅವರು ಯಾವ ಆಧಾರದ ಮೇಲೆ ಮಾತನಾಡಿದ್ದಾರೆಯೋ ಅದನ್ನು ಬಹಿರಂಗಪಡಿಸಲಿ. ತನಿಖೆ ಮಾಡುವುದೇನಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಪ್ರಸ್ತುತ ದಿನದಲ್ಲಿ ಹತ್ತು ಹಲವಾರು ಸಾಹಿತ್ಯ, ವಿಕೃತ ಸಾಹಿತ್ಯ ಬರುತ್ತವೆ. ನಂಬಲಾರದ ಬರಹ, ವಿಡಿಯೋಗಳು ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣ ಮತ್ತು ಪುಸ್ತಕ ರೂಪದಲ್ಲಿ ಇವೆ. ಡಿನರಿ ನೋಡಿ ಮಾತನಾಡಿದ್ದೇನೆ ಎನ್ನುತ್ತಿದ್ದಾರೆ. ಡಿನರಿ ಯಾವುದು? ಅದರ ಅರ್ಹತೆ ಏನು? ವಿಕಿಪೀಡಿಯಾ ಈಗಾಗಲೇ ಹಲವು ಸಲ ತನಿಖೆಗೆ ಒಳಗಾಗಿದೆ. ವಿಕಿಪೀಡಿಯಾ ಮುಖ್ಯಸ್ಥನ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts