More

    ಸರಳ, ಸಾಂಕೇತಿಕ ಜಂಬೂಸವಾರಿ

    ಧಾರವಾಡ: ಕರೊನಾ ಕರಿಛಾಯೆ ನಡುವೆಯೂ ನಗರದ ಗೌಳಿಗಲ್ಲಿ ಮಾರುತಿ ದೇವಸ್ಥಾನದ ಆವರಣದಲ್ಲಿ ಧಾರವಾಡ ಮೂಲ ಜಂಬೂಸವಾರಿ ಮೆರವಣಿಗೆ ಸೋಮವಾರ ಜರುಗಿತು.

    ಕೋವಿಡ್ ಹಿನ್ನೆಲೆಯಲ್ಲಿ ಜನದಟ್ಟಣೆಯಾಗದಂತೆ ಕೇವಲ ಜನಪದ ವಾದ್ಯ ಮೇಳದೊಂದಿಗೆ ಸರಳವಾಗಿ ನಡೆಯಿತು. ಮುತೆôದೆಯರ ಆರತಿ ಹಾಗೂ ಸೂರಶೆಟ್ಟಿಕೊಪ್ಪದ ಕರಡಿ ಮಜಲು ತಂಡದೊಂದಿಗೆ ಮೆರವಣಿಗೆ ಮೂಲಕ ಮಂಜುಗೌಡ ಪಾಟೀಲ ಅವರ ಮನೆಗೆ ತೆರಳಿ ಮಾರುತಿ ದೇವರ ಬೆಳ್ಳಿ ಮೂರ್ತಿ ಪಡೆದು ಶ್ರೀಮಠದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ದೇವಸ್ಥಾನದಲ್ಲಿ ಅರ್ಚಕರಿಂದ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಓಮ್ನಿ ವಾಹನದ ಮೇಲೆ ನಿರ್ವಿುಸಿದ ಆನೆಯ ಪ್ರತಿಕೃತಿಯ ಮೇಲೆ ಅಂಬಾರಿಯನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಮಾರುತಿ ದೇವರ ಜಂಬೂಸವಾರಿ ಮೆರವಣಿಗೆಗೆ ಮಂಜುಗೌಡ ಪಾಟೀಲ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಗೌಳಿ ಗಲ್ಲಿಯ ಮುಖಂಡರಾದ ಮಂಜುಗೌಡ ಪಾಟೀಲ, ಪಿ.ಎಸ್. ಕಿರೇಸೂರ, ಹನುಮೇಶ ಸರಾಫ, ಆರ್.ಎಸ್. ಜಂಬಗಿ, ಪ್ರಕಾಶ ಸುಣಗಾರ, ಹನುಮಂತ ಕಮತರ, ಪ್ರಸಾದ ಶೆಟ್ಟರ್, ಪ್ರಶಾಂತ ಯರಗಂಬಳಿಮಠ, ಇತರರಿದ್ದರು.

    ದೇವಿಯ ಮೂರ್ತಿ ಮೆರವಣಿಗೆ
    ಧಾರವಾಡ:
    ಪ್ರತಿವರ್ಷ ಅದ್ದೂರಿಯಿಂದ ಜರುಗುತ್ತಿದ್ದ ಧಾರವಾಡ ದಸರಾ ಜಂಬೂಸವಾರಿ ಮೆರವಣಿಗೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರ ಸಾಂಕೇತಿಕವಾಗಿ ಆಚರಿಸಲಾಯಿತು. ವಾಹನದ ಮೇಲೆ ಆನೆಯ ಪ್ರತಿಕೃತಿ ನಿರ್ವಿುಸಿ ಅದರ ಮೇಲೆ ದೇವಿಯ ಮೂರ್ತಿ ಇರಿಸಿ ಜಂಬೂಸವಾರಿ ನಡೆಸಲಾಯಿತು.

    ಉತ್ಸವ ಸಮಿತಿ ವತಿಯಿಂದ ನಗರದ ಬಂಡೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಗಾಂಧಿನಗರದಲ್ಲಿನ ಬಂಡೆಮ್ಮ ದೇವಸ್ಥಾನದಿಂದ ಆರಂಭವಾಗಿ ಈಶ್ವರ ದೇವಸ್ಥಾನ ತಲುಪಿ ನಂತರ ಬಂಡೆಮ್ಮ ದೇವಸ್ಥಾನಕ್ಕೆ ಮರಳಿತು. ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ, ಎಪಿಎಂಸಿ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಪಿ.ಎಚ್. ಕಿರೇಸೂರ, ಖಜಾಂಚಿ ವಿಲಾಸ ತಿಬೇಲಿ, ಗಣಪತರಾವ ಮುಂಜಿ, ನಾರಾಯಣ ಕೋಪರ್ಡೆ, ಮನೋಜ ಸಂಗೊಳ್ಳಿ, ಹೇಮಾಕ್ಷಿ ಕಿರೇಸೂರ, ಕರೆಪ್ಪ ಸುಣಗಾರ, ವಿಶಾಲ ಮರಡಿ, ಅನುರಾಧಾ ಆಕಳವಾಡಿ, ಇದ್ದರು.

    ಹುಲಿಗೆಮ್ಮ ದೇವಸ್ಥಾನದಲ್ಲಿ ವಿಜಯ ದಶಮಿ
    ಹುಬ್ಬಳ್ಳಿ:
    ನಗರದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಿಗೆ ಮಹಾಭಿಷೇಕ ನೆರವೇರಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮುತ್ತೈದೆಯರಿಂದ ಅರಿಶಿಣ, ಕುಂಕುಮ ಏರಿಸಿ 108 ತುಪ್ಪದ ಬತ್ತಿಯ ಆರತಿಯಿಂದ ಉದಯಪೂಜೆ ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿರಿಸಿ ಡೊಳ್ಳು ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

    ಪಲ್ಲಕ್ಕಿ ಮೆರವಣಿಗೆಯು ಬನ್ನಿ ಮಹಾಂಕಾಳಿ ದೇವಸ್ಥಾನಕ್ಕೆ ಹೋಗಿ ಪೂಜೆಗೈದು ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿತು. ಮಾತೋಶ್ರೀ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ನವರಾತ್ರಿಯಲ್ಲಿ ದೇವಿ ಮಹಾತ್ಮೆಯ ಪುರಾಣ ಪ್ರವಚನ ಮಾಡಿದ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿಯವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಶ್ರೀಧರ ನಿಡಗುಂದಿ, ಎಂ. ಎಫ್. ಹೆಬ್ಬಳ್ಳಿ, ಗುರು ಹೊರಕೇರಿ, ಪರಶುರಾಮ ಸುಳ್ಳದ, ಯಲ್ಲಪ್ಪ ಕೊಸಗಿ, ವಿಜಯ ಆಲೂರ, ವಿಕ್ರಮ ಶಿರನಳ್ಳಿ, ಸಂತೋಷ ಶಾಲಗಾರ, ಶರದ ನಿಡಗುಂದಿ, ಮಲ್ಲು ಅನಂತಪುರ, ಶಿವಾಜಿ ಗುಂಡ, ಶಾರದಮ್ಮ ಕಸ್ತೂರಿ, ಶೈಲಜಾ ಹಳ್ಳಿಕೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts