More

    ಸಮುದಾಯಗಳ ಸಹಭಾಗಿತ್ವ ಮುಖ್ಯ

    ಮೇಲುಕೋಟೆ: ಸರ್ಕಾರದ ಕಾರ್ಯಕ್ರಮಗಳಲ್ಲಿ ಸಮುದಾಯಗಳ ಸಹಭಾಗಿತ್ವ ಇದ್ದರೆ ಗ್ರಾಮಗಳ ಅಭಿವೃದ್ಧಿ ಬಹುಬೇಗ ಆಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಹೇಳಿದರು.
    ಅವರು ಮೇಲುಕೋಟೆ ಸಮೀಪದ ನಾರಣಾಪುರದಲ್ಲಿ ಪಾಂಡವಪುರದ ವಿಜಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ದೇಶ ಅಮೃತ ಮಹೋತ್ಸವ ಆಚರಿಸುತ್ತಿದೆ. ಸರ್ಕಾರ ರೈತರು, ಬಡವರ ಅನುಕೂಲ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ತಾಂತ್ರಿಕ ಕಾರಣದಿಂದ ಕೆಲವರು ಈ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಅನೇಕರು ಇನ್ನೂ ಬಡತನರೇಖೆ ಕೆಳಗೇ ಇದ್ದಾರೆ. ಹಾಗಾಗಿ ಸಮುದಾಯಗಳು ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೆ ತಲುಪಿಸುವ ಸೇವೆ ಮಾಡಬೇಕು. ಆ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.
    ಗ್ರಾಮ ದತ್ತು: ಕೃಷಿಯನ್ನೇ ಒಂದು ಧರ್ಮವಾಗಿ ಸ್ವೀಕರಿಸಿದರೆ ಸೂಕ್ತ ಆದಾಯ ಗಳಿಸಬಹುದು ಎಂದ ಡಾ.ನಾಗರಾಜು, ನಾರಣಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದರು.
    ವಿಜಯ ಕಾಲೇಜಿನ ಕಾರ್ಯದರ್ಶಿ ಬಸವರಾಜು, ಬಳಿಘಟ್ಟ ಗ್ರಾಪಂ ಅಧ್ಯಕ್ಷ ಜಯರಾಮು, ಸದಸ್ಯ ಎನ್.ಕೆ. ನಾಗೇಶ್, ಅಣ್ಣಯ್ಯ, ಭೂಮಾಪನಾ ಇಲಾಖೆ ನಿವೃತ್ತ ನಿರ್ದೇಶಕ ಮರಿಸ್ವಾಮಿಗೌಡ, ಶಿಕ್ಷಕರಾದ ರಮೇಶ್, ವೆಂಕಟರಾಮೇಗೌಡ, ಶಿಬಿರಾಧಿಕಾರಿ ವೆಂಕಟೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts